ಬಿಜೆಪಿಗೆ ಕುಸ್ತಿ ಮಾಡಲು ಜನರಿಲ್ಲ: ಹೀಗಾಗಿ ಸೇರಿಸಿಕೊಳ್ಳುತ್ತಿದ್ದಾರೆ, ಸೆರಿಸಿಕೊಳ್ಳಲಿ- ಡಿ.ಕೆ ಶಿವಕುಮಾರ್ ವ್ಯಂಗ್ಯ.

0
3

ಬೆಂಗಳೂರು,ಡಿಸೆಂಬರ್,1,2022(www.justkannada.in): ಬಿಜೆಪಿ ಪಕ್ಷಕ್ಕೆ ರೌಡಿ ಶೀಟರ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ಬಿಜೆಪಿಗೆ ಕುಸ್ತಿ ಮಾಡಲು ಜನರಿಲ್ಲ ಹೀಗಾಗಿ ಕುಸ್ತಿ ಮಾಡಲು ಸೇರಿಸಿಕೊಳ್ಳುತ್ತಿದ್ದಾರೆ. ಸೇರಿಸಿಕೊಳ್ಳಲಿ.  ಬಿಜೆಪಿಯವರು ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಲ್ಲ. ಜನರ ಭಾವನೆ ಮೇಲೆ ರಾಜಕೀಯ ಮಾಡೊದು ಬಿಜೆಪಿ ಸಿದ್ದಾತ . ಜನರಿಗೆ ಒಳ್ಳೆಯದು ಮಾಡಬೇಕು ಎನ್ನುವುದು ಕಾಂಗ್ರೆಸ್  ಸಿದ್ಧಾಂತ ಎಂದರು.

Key words: kpcc-president-DK Shivakumar-bjp- rowdy sheeter