Saturday, September 26, 2026

BDA Apartments

ಬಿಜೆಪಿಗೆ ಗುಡ್ ಬೈ: ‘ಕೈ’ ಹಿಡಿದ ಕೆ.ಪಿ ನಂಜುಂಡಿ BDA JK_Adv BDA Adv
Home Front Page ಬಿಜೆಪಿಗೆ ಗುಡ್ ಬೈ: ‘ಕೈ’ ಹಿಡಿದ ಕೆ.ಪಿ ನಂಜುಂಡಿ.

ಬಿಜೆಪಿಗೆ ಗುಡ್ ಬೈ: ‘ಕೈ’ ಹಿಡಿದ ಕೆ.ಪಿ ನಂಜುಂಡಿ.

ಬೆಂಗಳೂರು,ಏಪ್ರಿಲ್,24,2024 (www.justkannada.in):  ನಿನ್ನೆಯಷ್ಟೆ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಪಿ ನಂಜುಂಡಿ ಅವರು ಇಂದು ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

ವಿಧಾನ ಪರಿಷತ್ ಮತ್ತು ಬಿಜೆಪಿಯ ಪಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ ಕೆಪಿ ನಂಜುಂಡಿ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ  ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್​​ ಸುರ್ಜೇವಾಲ  ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿ ನಂಜುಂಡಿ ಕಾಂಗ್ರೆಸ್ ಸೇರಿದರು.ಬಿಜೆಪಿಗೆ ಗುಡ್ ಬೈ kp nanjundi kp nanjundi 1

ನಂಜುಂಡಿ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದರು. ಸುಮಾರು ಒಂದು ವಾರದಿಂದ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಭೇಟಿಯ ನಂತರ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಗುಮಾನಿ ಹುಟ್ಟಿತ್ತು. ಇದೀಗ ಅಧಿಕೃತವಾಗಿ ಕಾಂಗ್ರೆಸ್​ ಪಕ್ಷ ಸೇರಿದ್ದಾರೆ.

Key words: KP Nanjundi, join, congress