ಕರ್ತವ್ಯನಿರತ ಅಧಿಕಾರಿಗಳ ಮೇಲೆ ಸಿಬ್ಬಂದಿಯಿಂದಲೇ ಹಲ್ಲೆ

ಕೊಳ್ಳೇಗಾಲ, ಆ.8,2019(www.justkannada.in):  ಕರ್ತವ್ಯನಿರತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಮಹಿಳಾ ಅಧಿಕಾರಿ ಹಾಗೂ ಕಾರ್ಯದರ್ಶಿ ಮೇಲೆ ಬಿಲ್‌ ಕಲೆಕ್ಟರೊಬ್ಬರು ಹಲ್ಲೆ ಮಾಡಿರುವ ಘಟನೆ ಸತ್ತೇಗಾಲದಲ್ಲಿ ನಡೆದಿದೆ.

ಪಿಡಿಒ ನಮಿತ ತೇಜಗೌಡ ಹಾಗೂ ಲೋಕೇಶ್ ಹಲ್ಲೆಗೊಳ್ಳಗಾಗಿರುವ ಅಧಿಕಾರಿಗಳು. ಬಿಲ್‌ ಕಲೆಕ್ಟರ್ ನಾಗಸುಂದರ್  ಎಂಬುವವರೇಹಲ್ಲೆ ಮಾಡಿದ್ದಾರೆ.  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲತಾಕುಮಾರಿ ಭೇಟಿ ಹಿನ್ನಲೆ ಹಳೇ ಕಡತಗಳ ಪರಿಶೀಲನೆ ನಡೆಸಿದಾಗ ಬಿಲ್‌ ಕಲೆಕ್ಟರ್‌‌ನಿಂದ ಹಣ ಬಾಕಿ ಇರುವುದು ಕಂಡು ಬಂದಾಗ ಈ ಬಗ್ಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮಾತು ಬೆಳೆದು ಹಲ್ಲೆಗೆ ಮುಂದಾಗಿದ್ದು ಇಬ್ಬರು ಅಧಿಕಾರಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಪವಿಭಾಗ ಆಸ್ಪತ್ರೆಗೆ ಸಿಎಸ್‌ ಲತಾಕುಮಾರಿ ಭೇಟಿ ನೀಡಿ ಗಾಯಾಳು ಅಧಿಕಾರಿಗಳ ಆರೋಗ್ಯ ವಿಚಾರಿಸಿದರು. ಘಟನೆ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲ್ಲೆ ಆರೋಪಿ ನಾಗಸುಂದರ್‌ನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Key words:kollegal- Assault –staff- officers­ -duty