Monday, September 7, 2026

BDA Apartments

Home Front Page ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಗೆದ್ದರೆ ಫ್ಲೆಆಫ್’ಗೆ ಎಂಟ್ರಿ

ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಗೆದ್ದರೆ ಫ್ಲೆಆಫ್’ಗೆ ಎಂಟ್ರಿ

ಬೆಂಗಳೂರು, ಅಕ್ಟೋಬರ್ 07, 2021 (www.justkannada.in): ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಇಂದು ಕುತೂಹಲಕಾರಿ ಪಂದ್ಯನಡೆಯಲಿದೆ.

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ 23 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 12 ಪಂದ್ಯಗಳಲ್ಲಿ ಮತ್ತು ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

ಕೆಕೆಆರ್​ಗೆ ಇದು ಮಹತ್ವದ ಪಂದ್ಯವಾಗಿದ್ದು, ಗೆದ್ದರೆ ಬಹುತೇಕ ಪ್ಲೇ ಆಫ್​ಗೆ ಲಗ್ಗೆಯಿಟ್ಟಂತೆ. ಇತರೆ ತಂಡಗಳಿಗೆ ಹೋಲಿಸಿದರೆ ಕೋಲ್ಕತ್ತಾ ಉತ್ತಮ ರನ್​ರೇಟ್ ಕೂಡ ಹೊಂದಿದೆ. ಹೀಗಾಗಿ ಪ್ಲೇ ಆಫ್​ಗೆ ಬರುವುದು ಖಚಿತವಾಗಲಿದೆ.

ರಾಜಸ್ಥಾನ್ ಬಹುತೇಕ ಟೂರ್ನಿಯಿಂದ ಹೊರಬಿದ್ದಿದ್ದು ಅಧಿಕೃತವಾಗಬೇಕಷ್ಟೆ. ಕನಿಷ್ಠ ಪ್ರತಿಷ್ಠೆಗಾದರೂ ಆರ್​ಆರ್​ ಈ ಪಂದ್ಯವನ್ನು ಗೆಲ್ಲುವ ಯೋಜನೆಯಲ್ಲಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.