ಮಾವು ಉತ್ಕೃಷ್ಟ ಕೇಂದ್ರಕ್ಕೆ ಭೇಟಿ: ಸಭೆ ನಡೆಸಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಚಿವ ನಾರಾಯಣಗೌಡ…

ಕೋಲಾರ, ಸೆಪ್ಟಂಬರ್,14,2020(www.justkannada.in):   ವಾರದೊಳಗೆ ರೇಷ್ಮೆ ಬೆಳೆಗಾರರ ಖಾತೆಗೆ ಬೆಂಬಲ ಬೆಲೆ ಹಣ ಜಮಾ ಆಗಬೇಕು. ಇಲ್ಲದಿದ್ದಲ್ಲಿ ಸಸ್ಪೆಂಡ್ ಮಾಡುತ್ತೇನೆ‌ ಎಂದು ಕೋಲಾರ್ ರೇಷ್ಮೆ ಇಲಾಖೆ ಡಿಡಿ ಆಂಜನೇಯ ಗೌಡ ಅವರಿಗೆ ಪೌರಾಡಳಿತ, ತೋಟಗಾರಿಕೆ , ರೇಷ್ಮೆ ಇಲಾಖೆ ಸಚಿವ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ‌.kolar-visit-mango-excellence-center-minister-narayana-gowda-meeting

ಸಚಿವ ಡಾ. ನಾರಾಯಣಗೌಡ ಇಂದು ಕೋಲಾರ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ  ಶ್ರೀನಿವಾಸಪುರದ ಹೊಗಳಗೆರೆಯಲ್ಲಿರುವ ಮಾವು ಉತ್ಕೃಷ್ಟ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು‌. ಬಳಿಕ ಸಭೆ ನಡೆಸಿದ ಸಚಿವ ನಾರಾಯಣಗೌಡ,  ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡರು. ಮ್ಯಾಂಗೊ ಬೋರ್ಡ್ ಇದ್ದೂ ಇಲ್ಲದಂತಿದೆ. ರೈತರಿಗೆ ಸರಿಯಾದ ಅನುಕೂಲ ಆಗುತ್ತಿಲ್ಲ. ಸರ್ಕಾರದಿಂದ ಹಣ ನೀಡಲು ಸಿದ್ದ, ಆದರೆ ರೈತರಿಗೆ ಅದು ಸಹಾಯವಾಗುವಂತಿರಬೇಕು. ಹೀಗಾಗಿ ಅಧಿವೇಶನ ಮುಗಿದ ತಕ್ಷಣ ಮೀಟಿಂಗ್ ನಡೆಸಿ ಬೋರ್ಡ್ ಉನ್ನತೀಕರಣ ಮಾಡುತ್ತೇವೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಹಣ್ಣು, ತರಕಾರಿ, ಹೂವು ಮಾರಾಟವಾಗದೆ ನಷ್ಟವಾಗಿತ್ತು. ಸರ್ಕಾರ ಪರಿಹಾರ ಕೂಡ ಘೋಷಣೆ ಮಾಡಿದೆ‌. ಕೆಲವು ಕಡೆ ತಾಂತ್ರಿಕ ಕಾರಣದಿಂದ ರೈತರ ಖಾತೆಗೆ ಹಣ ಜಮಾ ಆಗಿಲ್ಲ. ಅಧಿಕಾರಿಗಳು ಎಲ್ಲ ಸಮಸ್ಯೆ ಸರಿಪಡಿಸಬೇಕು. ವಾರದೊಳಗೆ ಪರಿಹಾರ ಹಣ ಸಂದಾಯ ಆಗಬೇಕು ಎಂದು ಸೂಚನೆ ನೀಡಿದರು.

ಇದೆ ವೇಳೆ ರೇಷ್ಮೆ ಬೆಳೆಗಾರರಿಗೆ ನೀಡಿರುವ ಬೆಂಬಲ ಬೆಲೆ ರೈತರಿಗೆ ಈವರೆಗೂ ತಲುಪಿಲ್ಲ ಎಂಬ ಕಾರಣಕ್ಕೆ ರೇಷ್ಮೆ ಇಲಾಖೆ ಡಿಡಿ ಅಂಜನೆಯಗೌಡ ಅವರನ್ನ ತರಾಟೆ ತೆಗೆದುಕೊಂಡ ಸಚಿವ ನಾರಾಯಣಗೌಡ,  ಐದು ದಿನದೊಳಗೆ ರೈತರ ಖಾತೆಗೆ ಹಣ ಹೋಗಬೇಕು‌. ಬೇರೆ ಎಲ್ಲ ಕಡೆ ಹಣ ಸಂದಾಯ ಆಗಿದೆ‌. ರೈತರು ಅಭಿನಂದನೆ ಕೂಡ ಸಲ್ಲಿಸಿದ್ದಾರೆ‌. ಆದ್ರೆ ಕೋಲಾರದಲ್ಲಿ ಮಾತ್ರ ಯಾಕೆ ವಿಳಂಬ ಆಗಿದೆ. ತಕ್ಷಣ ಸಮಸ್ಯೆ ಪರಿಹಾರ ಆಗದಿದ್ದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಮ್ಯಾಂಗೊ ಬೋರ್ಡ್ ಗೆ 25 ಕೋಟಿ ರೂ. ವಾರ್ಷಿಕ ಅನುದಾನ ನೀಡುವ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ ಸಚಿವ ನಾರಾಯಣಗೌಡ,  ಡ್ರಿಪ್ ಇರಿಗೇಷನ್ ಗೆ ಶೇ. ನೂರರಷ್ಟು ಸಬ್ಸಿಡಿ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ.  ಸಭೆಯಲ್ಲಿ  ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ , ಎಂ ಎಲ್ ಸಿ ನಾರಾಯಣಸ್ವಾಮಿ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.kolar- Visit - Mango -Excellence –Center-  Minister- Narayana Gowda-meeting

ಸಚಿವ ನಾರಾಯಣಗೌಡರಿಗೆ ಅಭಿನಂದನೆ..

ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂಧಿಸಿ ಸಮಸ್ಯೆ ಬಗೆಹರಿಸಿ, ಬೆಂಬಲಕ್ಕೆ ನಿಂತ ನೀವು ರೈತ ನಾಯಕ ಎಂದು ಕೋಲಾರದ ರೇಷ್ಮೆ ಬೆಳೆಗಾರರು ಸಚಿವ ಡಾ| ನಾರಾಯಣಗೌಡ ಅವರನ್ನ ಅಭಿನಂದಿಸಿದ್ದಾರೆ. ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆಗೆ ಸಚಿವರು ಆಗಮಿಸಿದ ವೇಳೆ ರೈತರು ಸಚಿವರಿಗೆ ಸನ್ಮಾನ ಮಾಡಿದರು.  ಲಾಕ್ ಡೌನ್ ಆದಾಗ ರೇಷ್ಮೆ ಮಾರುಕಟ್ಟೆ ಕ್ಲೋಸ್ ಆಗಿತ್ತು. ತಕ್ಷಣ ಓಪನ್ ಮಾಡಿ ಅನುಕೂಲ ಮಾಡಿಕೊಟ್ಟಿದ್ದೀರಿ. ಬಳಿಕ ಬೆಲೆ ಕುಸಿತ ಆದಾಗ ಬೆಂಬಲ ಬೆಲೆ ನೀಡಿ, ನೇರವಾಗಿ ರೈತನ ಖಾತೆಗೆ ಹಣ ಜಮಾ ಆಗಲು ಆದೇಶ ಮಾಡಿದ್ದೀರಿ. ಇದರಿಂದ ರೈತರು ನೆಮ್ಮದಿ ಬದುಕು ಸಾಗಿಸಲು ಸಾಧ್ಯವಾಗಿದೆ ಎಂದು ಸಚಿವರ ಕಾರ್ಯವನ್ನ ರೈತರು ಶ್ಲಾಘಿಸಿದರು.

Key words: kolar- Visit – Mango -Excellence –Center-  Minister- Narayana Gowda-meeting