ನಕಲಿ ಅಂಗವಿಕಲನಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು…..

ಕೊಡಗು,ಡಿ,6,2019(www.justkannada.in):  ಕಾಲು ಊನಗೊಂಡಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ ನಕಲಿ ಅಂಗವಿಕಲನಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಕೊಡಗಿನಲ್ಲಿ ನಡೆದಿದೆ.

ವಿರಾಜಪೇಟೆ ತಾ. ಪೊನ್ನಂಪೇಟೆಯಲ್ಲಿ ಈ ಘಟನೆ ನಡೆದಿದೆ. ಅಂಕೋಲ‌ ಮೂಲದ ವಿನಯ್ ಗೂಸ ತಿಂದ ನಕಲಿ ಅಂಗವಿಕಲ. ವಿನಯ್ ಕಾಲು ಊನಗೊಂಡಂತೆ ನಟಿಸಿ ತಾನು ಅಂಗವಿಕಲ ಎಂದು ಹೇಳಿಕೊಂಡು ಭಿಕ್ಷೆ ಬೇಡುತ್ತಿದ್ದ. ಇದನ್ನ ಗಮನಿಸಿದ ಸಾರ್ವಜನಿಕರು ಆತನನ್ನ ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

ಅಂಗವಿಕಲನಂತೆ ನಟಿಸುತ್ತಿದ್ದ ವಿನಯ್ ನಿಜವಾದ ಹೆಸ್ರು ಅಮಿತ್ ಕುಲಕರ್ಣಿ ಆಗಿದ್ದು. ಈತನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಪ್ರಕರಣ ದಾಖಲಾಗಿದೆ.

Key words: kodagu-public – fake handicap – police.