ಸಿಎಂ ಬಿಎಸ್ ವೈ ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್: ಸಂಸದ ಬಚ್ಚೇಗೌಡರ ವಿರುದ್ದ ದೂರು…

ಬೆಂಗಳೂರು,ಡಿ,7,2019(www.justkannada.in):  ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಡಿಸೆಂಬರ್ 5 ರಂದು ಮುಗಿದಿದ್ದು ಡಿಸೆಂಬರ್ 9 ರಂದು ಫಲಿತಾಂಶ ಹೊರ ಬೀಳಲಿದೆ. ಉಪಚುನಾವಣೆಯಲ್ಲಿ ಸಂಸದ ಬಚ್ಚೇಗೌಡರು ತಮ್ಮ ಪುತ್ರ ಶರತ್ ಬಚ್ಚೇಗೌಡರನ್ನ ಬೆಂಬಲಿಸಿದ್ದಾರೆ ಎಂದು ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಸಿಎಂ ಬಿಎಸ್ ಯಡಿಯೂರಪ್ಪಗೆ ದೂರು ನೀಡಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿದ ಎಂಟಿಬಿ ನಾಗರಾಜ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಚರ್ಚಿಸಿದರು. ಇದೇ ವೇಳೆ ಸಂಸದ ಬಚ್ಚೇಗೌಡರ ವಿರುದ್ದ ಸಿಎಂ ಬಿಎಸ್ ವೈಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಸಂಸದ ಬಚ್ಚೇಗೌಡರು ನನ್ನನ್ನ ಬೆಂಬಲಿಸಿಲ್ಲ.  ಮಗನ ಪರವಾಗಿ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ತಮ್ಮ ಬೆಂಬಲಿಗರಿಗೂ ಕರೆ ಮಾಡಿ ಪುತ್ರನನ್ನ ಬೆಂಬಲಿಸುವಂತೆ ಹೇಳಿದ್ದಾರೆ. ಈ ಬಗ್ಗೆ ತನ್ನಬಳಿ ಸಾಕ್ಷಿಗಳಿವೆ ಎಂದು ಸಿಎಂ ಬಿಎಸ್ ವೈ ಬಳಿ ಎಂಟಿಬಿ ನಾಗರಾಜ್ ಹೇಳಿದ್ದಾರೆ.

Key words: BJP candidate -MTB Nagaraj -met -CM BSY-Complaint –against- MP Bachega Gowda.