Thursday, September 17, 2026

BDA Apartments

ಅಧಿಕಾರದ ಲಾಲಾಸೆಗೆ ಪಕ್ಷ ಬಿಟ್ಟು ಕೆಜೆಪಿ ಕಟ್ಟಿದ್ದು ನೆನಪಿದೆ- ಬೆನ್ನಿಗೆ ಚ...
Home Front Page ಅಧಿಕಾರದ ಲಾಲಾಸೆಗೆ ಪಕ್ಷ ಬಿಟ್ಟು ಕೆಜೆಪಿ ಕಟ್ಟಿದ್ದು ನೆನಪಿದೆ- ಬೆನ್ನಿಗೆ ಚೂರಿ ಹಾಕಿದ್ದಾರೆಂದ ಬಿಎಸ್ ವೈಗೆ...

ಅಧಿಕಾರದ ಲಾಲಾಸೆಗೆ ಪಕ್ಷ ಬಿಟ್ಟು ಕೆಜೆಪಿ ಕಟ್ಟಿದ್ದು ನೆನಪಿದೆ- ಬೆನ್ನಿಗೆ ಚೂರಿ ಹಾಕಿದ್ದಾರೆಂದ ಬಿಎಸ್ ವೈಗೆ ಲಕ್ಷ್ಮಣ್ ಸವದಿ ತಿರುಗೇಟು.

ಬೆಳಗಾವಿ,ಏಪ್ರಿಲ್,27,2023(www.justkannada.in): ಲಕ್ಷ್ಮಣ್  ಸವದಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಹೇಳಲು ಬಿ.ಎಸ್​​.ಯಡಿಯೂರಪ್ಪಗೆ ನೈತಿಕ ಹಕ್ಕಿಲ್ಲ. ಆ ಪಕ್ಷ ಬಿಎಸ್​ವೈರನ್ನು ಸಿಎಂ, ವಿಪಕ್ಷ ನಾಯಕರನ್ನಾಗಿ ಮಾಡಿತ್ತು. ಬಿ.ಎಸ್​.ಯಡಿಯೂರಪ್ಪ ಅಧಿಕಾರದ ಲಾಲಾಸೆಗಾಗಿ ಪಕ್ಷವನ್ನ ಬಿಟ್ಟು ಕೆಜೆಪಿ ಕಟ್ಟಿದ್ದು ನೆನಪಿದೆ. ಅವರಿಗೂ ಗೊತ್ತಿದೆ.  ಸಣ್ಣವರಿಗೆ ದೊಡ್ಡ ವ್ಯಕ್ತಿಯಾಗಿ ಹೇಳುವುದು ಸರಿಯಲ್ಲ. ಗೆಲ್ಲಿಸುವುದು ಸೋಲಿಸುವುದು  ಯಾರಕಡೆಯೂ ಇಲ್ಲ. ಮತದಾರರೇನು ಇವರ ಜೇಬಿನಲ್ಲಿ ಇದ್ದಾರಾ..? ಎಂದು  ಹರಿಹಾಯ್ದರು.ಅಧಿಕಾರದ ಲಾಲಾಸೆಗೆ ಪಕ್ಷ ಬಿಟ್ಟು ಕೆಜೆಪಿ ಕಟ್ಟಿದ್ದು ನೆನಪಿದೆ laxman savadi

ಗಂಡಸಾಗಿದ್ರೆ ಲಕ್ಷ್ಮಣ ಸವದಿ ಡಿಸಿಎಂ ಸ್ಥಾನ ಬೇಡ ಎನ್ನಬೇಕಿತ್ತು’ ಎಂಬ ಶಾಸಕ ರಮೇಶ್​ ಜಾರಕಿಹೊಳಿ ಹೇಳಿಕೆಗೆ  ಕಿಡಿಕಾರಿದ ಲಕ್ಷ್ಮಣ್ ಸವದಿ, ಈ ಬಗ್ಗೆ ಚುನಾವಣೆ ಬಳಿಕ ನಾನು ಉತ್ತರ ಕೊಡ್ತೇನೆ. ನನ್ನ ಕ್ಷೇತ್ರದ ಮತದಾರರು ಕೂಡ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದರು.

Key words: KJP –BJP-BS Yeddyurappa-Congress- Laxman Savadi