Monday, October 5, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಬೆಂಗಳೂರಿನಲ್ಲಿ ತಲೆ ಎತ್ತಿದೆ ‘ಕೆಜಿಎಫ್’ ಥೀಮ್ ಹೊಟೇಲ್.

ಬೆಂಗಳೂರಿನಲ್ಲಿ ತಲೆ ಎತ್ತಿದೆ ‘ಕೆಜಿಎಫ್’ ಥೀಮ್ ಹೊಟೇಲ್.

ಬೆಂಗಳೂರು,ನವೆಂಬರ್,23,2022(www.justkannada.in):  ‘ಕೆಜಿಎಫ್‌’ ಎಂಬುದೇ ಒಂದು ಬ್ರಾಂಡ್.‌ ಈ ‘ಕೆಜಿಎಫ್‌’ ಸಿನಿಮಾದ ಹೆಸರೇ ಇದೀಗ ಹೊಟೇಲ್‌ವೊಂದಕ್ಕೆ ನಾಮಕರಣ ಮಾಡಲಾಗಿದೆ.

ಹೌದು, ಸಿನಿಮಾದಲ್ಲಿ ‘ಕೆಜಿಎಫ್‌’ ಎಂದರೆ ಕೋಲಾರ ಗೋಲ್ಡ್‌ ಫೀಲ್ಡ್‌ ಎಂದಿದ್ದರೆ, ಈ ಹೊಟೇಲ್‌ ಉದ್ಯಮದಲ್ಲಿ ‘ಕೆಜಿಎಫ್‌’ ಎಂದರೆ ‘ಕನ್ನಡಿಗಾಸ್‌ ಗೋಲ್ಡನ್‌ ಫುಡ್’ ಎಂದರ್ಥ. ನರಾಚಿಯ ಮುಖ್ಯದ್ವಾರವನ್ನೇ ಹೋಲುವ ರೀತಿಯಲ್ಲಿ ಆರ್ಟ್‌ ವರ್ಕ್‌ ಮಾಡಿ ನಿರ್ಮಿಸಲಾಗಿದೆ. ಅಲ್ಲದೇ ನರಾಚಿ ಮಾದರಿಯಲ್ಲಿ ಒಳಾಂಗಣವನ್ನು  ನಿರ್ಮಿಸಲಾಗಿದೆ. ಸುಮಾರು 200 ಆಸನಗಳ ವ್ಯವಸ್ಥೆಯೊಂದಿಗೆ ಬೆಂಗಳೂರಿನ ಸಹಕಾರನಗರದಲ್ಲಿ ಈ ಹೊಟೇಲ್‌ ತಲೆ ಎತ್ತಿದ್ದು, ನೋಡುಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.ಬೆಂಗಳೂರಿನಲ್ಲಿ ತಲೆ ಎತ್ತಿದೆ ‘ಕೆಜಿಎಫ್’ ಥೀಮ್ ಹೊಟೇಲ್ kgf

ಬೃಹತ್‌ ಗೋಡೆ, ಗೋಡೆಗೆ ಕಲ್ಲುಗಳ ರೀತಿಯ ಕೆತ್ತನೆ. ದೊಡ್ಡದಾದ ಮುಖ್ಯದ್ವಾರ ಥೇಟ್‌ ರಣರೋಚಕ ಕಥೆ ಹೇಳಿದ್ದ ‘ಕೆಜಿಎಫ್‌’ ನರಾಚಿಯನ್ನೇ ನೆನಪಿಸುತ್ತಿದೆ. ಇಲ್ಲಿ ಬಗೆಬಗೆ ತಿಂಡಿಯ ನಳಪಾಕದ ರುಚಿ ಸಿಗಲಿದೆ. ಈ ವಿಶಿಷ್ಟ ಹೊಟೇಲ್ ನ ಸೌಂದರ್ಯ ಕಣ್ತುಂಬಿಕೊಳ್ಳಲು ಭೇಟಿ ನೀಡಿ.

ಸ್ಥಳ: ನಂ.15-16, 5ನೇ ಮುಖ್ಯರಸ್ತೆ, ಶಾಂತಿವನ, ಸಹಕಾರ ನಗರ, ಸ್ಟೆರ್ಲಿಂಗ್ ಹೈಟ್ಸ್ ಅಪಾರ್ಟ್ಮೆಂಟ್ ಪಕ್ಕ. ಬೆಂಗಳೂರು-92

Contact: 8495880088, 8496880088

ಶ್ರೀನಿವಾಸ್ ಮುರುಳಿ, ಮಾಲೀಕರು

Key words: KGF -Theme Hotel -raised -head – Bangalore.