Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Cinema ಐದು ಭಾಷೆಗಳಲ್ಲಿ ರವಿ ಬಸ್ರೂರ್ ಚಿತ್ರ ನಿರ್ಮಾಣ

ಐದು ಭಾಷೆಗಳಲ್ಲಿ ರವಿ ಬಸ್ರೂರ್ ಚಿತ್ರ ನಿರ್ಮಾಣ

ಬೆಂಗಳೂರು, ಮೇ 10, 2019 (www.justkannada.in): ‘ಕೆಜಿಎಫ್’  ಸಿನಿಮಾಗೆ ರವಿ ಬಸ್ರೂರ್ ಸಂಗೀತ ನೀಡಿದ್ದರು. ಇದೀಗ ಅವರ ನಿರ್ದೇಶನದ ಸಿನಿಮಾ ಐದು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ.

‘ಕಟಕ’ ಸಿನಿಮಾ ನಂತರ ‘ಗಿರ್ಮಿಟ್’ ಎಂಬ ಮತ್ತೊಂದು ಸಿನಿಮಾವನ್ನು ಅವರು ಶುರು ಮಾಡಿದ್ದಾರೆ. ಸಿನಿಮಾ ಐದು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದ್ದು, ಇದು ಮಕ್ಕಳ ಸಿನಿಮಾವಾಗಿದೆ.

‘ಗಿರ್ಮಿಟ್’ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲೆಯಾಳಂ ಪೋಸ್ಟರ್ ರಿಲೀಸ್ ಆಗಿದೆ. ನಾಳೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದ ಹತ್ತಾರು ಮಕ್ಕಳು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.