ರಾಕಿಭಾಯ್ ನ್ಯೂ ಲುಕ್ ರಿಲೀಸ್: ಕೆಜಿಎಫ್-2 ಹವಾ ಮತ್ತೆ ಜೋರು !

ಬೆಂಗಳೂರು, ಜನವರಿ 05, 2020 (www.justkannada.in): ಅಭಿಮಾನಿಗಳಿಗೆ ಕೆಜಿಎಫ್​ ಟೀಂ ವಿಶೇಷ ಉಡುಗೊಡೆ ನೀಡುವ ಮುನ್ಸೂಚನೆ ಕೊಟ್ಟಿದೆ.

ಹೌದು. ಕೆಜಿಎಫ್​​​ ಚಾಪ್ಟರ್ 2 ಟೀಸರ್​ ರಿಲೀಸ್​ಗೆ ದಿನಗಳು ಬಾಕಿ ಇರುವಾಗಲೇ ರಾಕಿಭಾಯ್ ನ್ಯೂ ಲುಕ್​ ರಿಲೀಸ್ ಆಗಿದೆ.

ಕೆಜಿಎಫ್​ ಚಾಪ್ಟರ್ 2 ಟೀಸರ್​ ರಿಲೀಸ್​ಗೆ ಕೌಂಟ್​​ಡೌನ್ ಶುರುವಾಗಿದೆ. ಈ ನಡುವೆ ಚಿತ್ರತಂಡ ಒಂದೊಂದಾಗಿ ಚಿತ್ರದ ಗುಟ್ಟುಗಳನ್ನು ಬಿಟ್ಟುಕೊಡುತ್ತಿದೆ.

ಯಶ್​ ನ್ಯೂ ಲುಕ್​​​ ರಿಲೀಸ್ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್​ ಸಾಮ್ರಾಜ್ಯದ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದೆ ಅಂತ ಟ್ವೀಟ್​ ಮಾಡಿದ್ದಾರೆ.

ಟ್ವಿಟರ್​ನಲ್ಲಿ ಕೂಡ ಕೆಜಿಎಫ್ ಟ್ರೆಂಡಿಂಗ್​ನಲ್ಲಿದೆ. ಈ ನಡುವೆ ಸಾಮಾಜಿಕ ಜಾಲತಾಲಗಳಲ್ಲಿ ಮತ್ತೊಂದು ಅಭಿಯಾನ ಶುರುವಾಗಿದೆ.