ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು…

ಮೈಸೂರು,ಜನವರಿ,5,2021(www.justkannada.in): ಬೆಳೆ ವೈಫಲ್ಯ,  ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ನಡೆದಿದೆ.jk-logo-justkannada-mysore

ಪಿರಿಯಾಪಟ್ಟಣ ತಾಲ್ಲೂಕಿನ ಭೋಗನಹಳ್ಳಿ ಗ್ರಾಮದ ಪುಟ್ಟರಾಜು (41) ಆತ್ಮಹತ್ಯೆಗೆ ಶರಣಾದ ರೈತ. ರೈತ ಪುಟ್ಟರಾಜು ಗ್ರಾ.ಪಂ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡರಾಗಿದ್ದರು.

4 ಎಕರೆ ಜಮೀನು ಹೊಂದಿದ್ದ ಪುಟ್ಟರಾಜು ಪಟ್ಟಣದ ಎಸ್ ಬಿಐ, ಎಡಿಬಿ ಬ್ಯಾಂಕ್ ನಲ್ಲಿ 8 ಲಕ್ಷ ಬೆಳೆ ಸಾಲ ಮಾಡಿದ್ದರು. ಜತೆಗೆ ಕೆ.ಆರ್.ನಗರದ ಖಾಸಗಿ ಬ್ಯಾಂಕ್ ನಲ್ಲಿ 4 ಲಕ್ಷ ಬೆಳೆ ಸಾಲ ಮಾಡಿದ್ದರು ಎನ್ನಲಾಗಿದೆ. ಕಳೆದ 2 ವರ್ಷದಿಂದ ತಂಬಾಕು ಬೆಳೆಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಾರದ ಕಾರಣ ಪುಟ್ಟರಾಜು ಅವರಿಗೆ ನಷ್ಟವಾಗಿತ್ತು. farmer- commits -suicide –mysore-district

ಈ ಹಿನ್ನೆಲೆಯಲ್ಲಿ ಮನನೊಂದ ರೈತ ಪುಟ್ಟರಾಜು ಮನೆಯಲ್ಲಿ ಯಾರೂ ಇಲ್ಲದಿರುವಾಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: farmer- commits -suicide –mysore-district