Sunday, September 20, 2026

BDA Apartments

ಬಳ್ಳಾರಿಯಲ್ಲಿ ರಾಕಿ ಭಾಯ್ ನೋಡಲು ಮುಗಿಬಿದ್ದ ಜನ ! BDA JK_Adv BDA Adv
Home Cinema ಬಳ್ಳಾರಿಯಲ್ಲಿ ರಾಕಿ ಭಾಯ್ ನೋಡಲು ಮುಗಿಬಿದ್ದ ಜನ !

ಬಳ್ಳಾರಿಯಲ್ಲಿ ರಾಕಿ ಭಾಯ್ ನೋಡಲು ಮುಗಿಬಿದ್ದ ಜನ !

ಬಳ್ಳಾರಿ, ಡಿಸೆಂಬರ್ 28, 2019 (www.justkannada.in): ಸಂಡೂರಿನ ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಇನ್ನೂ ಹದಿನೈದು ದಿನಗಳ ಕಾಲ ಶೂಟಿಂಗ್ ನಡೆಯಲಿದೆ.

ಕೆಜಿಎಫ್ 2 ಚಿತ್ರೀಕರಣ ಇದೀಗ ಬಳ್ಳಾರಿಯ ಮೈನಿಂಗ್ ಕಂಪನಿಯ ಪರಿಸರದಲ್ಲಿ ಭರದಿಂದ ಸಾಗಿದೆ. ಶೂಟಿಂಗ್ ಗೆ ಬಂದ ರಾಕಿಂಗ್ ಸ್ಟಾರ್ ಯಶ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಶೂಟಿಂಗ್ ಗೆ ಆಗಮಿಸಿದ ಯಶ್ ನೋಡಲು ಜನ ಸಾಗರವೇ ಹರಿದುಬಂದಿದ್ದು, ತಮ್ಮ ನೆಚ್ಚಿನ ನಟನ ಕಣ್ತುಂಬಿಕೊಂಡಿದ್ದಲ್ಲದೆ, ಸೆಲ್ಫೀ ಪಡೆದುಕೊಂಡಿದ್ದಾರೆ.