ಕೆಜಿಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ: ಗಲಭೆಗೆ ಪ್ರಚೋದನೆ ನೀಡಿ ಬೆಂಕಿ ಹಚ್ಚಿದ್ದ ಆರೋಪಿ  ಬಂಧನ.

ಬೆಂಗಳೂರು,ಸೆಪ್ಟಂಬರ್,21,2021(www.justkannada.in): ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಗೆ ಪ್ರಚೋದನೆ ನೀಡಿ ವಾಹನಗಳಿಗೆ ಬೆಂಕಿ ಹಚ್ಚಿದ್ದ ಆರೋಪಿಯನ್ನ ಎನ್‌ಐಎ, ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ತಬ್ರೇಜ್‌ (35)  ಬಂಧಿತ ಆರೋಪಿ. ಈತ ಗಲಭೆ ನಡೆದ ನಂತರ ತಲೆ ಮರೆಸಿಕೊಂಡಿದ್ದು, ಇಂದು ಜಂಟಿ ಕಾರ್ಯಾಚರಣೆಯಲ್ಲಿ ಆತನನ್ನ ಬಂಧಿಸಲಾಗಿದೆ.  ತಬ್ರೇಜ್  ವಾಟ್ಸಾಪ್‌ ಗ್ರೂಪ್‌ ನಲ್ಲಿ ಗಲಭೆಗೆ  ಪ್ರಚೋದನೆ ನೀಡಿ ಗಲಭೆ ವೇಳೆ ವಾಹನಗಳಿಗೆ ಬೆಂಕಿ ಹಚ್ಚಿದ್ದ ಎನ್ನಲಾಗಿದೆ.

ಈತ ಎಸ್‌ಡಿಪಿಐ, ಪಿಎಫ್ ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಅಗಸ್ಟ್‌ 12, 2020ರಲ್ಲಿ ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ಗಲಭೆ ನಡೆಸಲಾಗಿತ್ತು.

Key words: kg halli- DJ halli -riot case-Arrest-accused