ಕೇರಳ ಸಿಎಂ ಭೇಟಿ ಮಾಡಿ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕ ಮತ್ತು ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಕೆ.

ಕೇರಳ,ಫೆಬ್ರವರಿ,7,2023(www.justkannada.in): ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನ  ಗಡಿ ಪ್ರದೇಶ ಅಭವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಭೇಟಿಯಾಗಿ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಮನವಿ ಮಾಡಿದರು.

ಗಡಿ ಪ್ರದೇಶ ಅಭವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಹಾಗೂ ಮಂಜೇಶ್ವರ ಶಾಸಕ ಅಶ್ರಪ್ ಮತ್ತು ಕಾಸರಗೋಡು ಶಾಸಕ ನೆಲ್ಲಿಕುನ್ನುರ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನ ಭೇಟಿ ಮಾಡಿ ಕೇರಳದಲ್ಲಿ ಕನ್ನಡಿಗರ ಸಮಸ್ಯೆಗಳ ಕುರಿತು ಮತ್ತು ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡದ ಹೆಸರುಗಳ ಸ್ಥಳ ನಾಮಗಳನ್ನು ಮಲೆಯಾಳಂ ಭಾಷೆಗೆ ಬದಲಾಯಿಸಿದ್ದು ಅವುಗಳನ್ನು ಸ್ಥಗಿತಗೊಳಿಸಲು ವಿನಂತಿಸಿದರು.

ಕೇರಳ ಹಾಗೂ ಕರ್ನಾಟಕದ ಮಧ್ಯೆ ಉತ್ತಮ ಬಾಂಧವ್ಯ ಮತ್ತು ಸಾಮರಸ್ಯವಿರುವುದನ್ನು ಗಮನಕ್ಕೆ ತಂದರು.

 

Key words: Kerala CM –met- Appoint- Kannada teachers -Kannada schools-appeal