Saturday, August 15, 2026

BDA Apartments

Home Crime ಕೆಇಎ ಪರೀಕ್ಷೆ ಅಕ್ರಮ ಪ್ರಕರಣ: ಆರೋಪಿ ಆರ್ ಡಿ ಪಾಟೀಲ್ ಸಹಚರನ ಬಂಧನ.

ಕೆಇಎ ಪರೀಕ್ಷೆ ಅಕ್ರಮ ಪ್ರಕರಣ: ಆರೋಪಿ ಆರ್ ಡಿ ಪಾಟೀಲ್ ಸಹಚರನ ಬಂಧನ.

ಕಲ್ಬುರ್ಗಿ,ನವೆಂಬರ್,10,2023(www.justkannada.in):  ಕೆಇಎ ನಡೆಸಿದ್ದ ಎಫ್ ಡಿಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆರ್.ಡಿ ಪಾಟೀಲ್ ತಲೆಮರಿಸಿಕೊಂಡಿದ್ದು, ಈ ನಡುವೆ ಆರ್ ಡಿ ಪಾಟೀಲ್ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.

ಕಲ್ಬುರ್ಗಿಯ ಅಶೋಕನಗರ ಠಾಣಾ ಪೊಲೀಸರು ಆರ್ ಡಿ ಪಾಟೀಲ್ ಸಹಚರ ಶಿವಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಶಿವಕುಮಾರ್ ಜೇವರ್ಗಿ ತಾಲ್ಲೂಕಿನ  ನೆಲೋಗಿ ಗ್ರಾಮದವನಾಗಿದ್ದು, ಆರ್ ಡಿ ಪಾಟೀಲ್  ಜೊತೆ ಸಂಪರ್ಕದಲಿದ್ದ ಎನ್ನಲಾಗಿದೆ.

ಸದ್ಯ ಶಿವಕುಮಾರ್ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.  ಕೆಇಎ ಪರೀಕ್ಷೆ ಆಕ್ರಮದಲ್ಲಿ ಆರ್​ಡಿ ಪಾಟೀಲ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಇದೇ ವೇಳೆ ಆರ್.ಡಿ ಪಾಟೀಲ್, ನವೆಂಬರ್ 5 ರಂದು ರಾತ್ರಿ ಮಹಾಲಕ್ಷ್ಮೀ ಅಪಾರ್ಟಮೆಂಟ್​ ಗೆ ಆಗಮಿಸಿ ರಾತ್ರಿ ಅಲ್ಲಿಯೇ ಅಡಗಿದ್ದ. ಮರು ದಿನ ಮಧ್ಯಾಹ್ನ ಪೊಲೀಸರು ಆಗಮಿಸುವ ಮಾಹಿತಿ ಸಿಕ್ಕ ತಕ್ಷಣ ಹಿಂಬದಿಯ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದನು.

Key words: KEA- exam- illegal- case-RD Patil’s- accomplice- arrested.