ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಬೇಡ: ಈ ವಿಚಾರದಲ್ಲಿ ರಾಜಕೀಯ ಸಲ್ಲದು-ಶಾಸಕ ತನ್ವೀರ್ ಸೇಠ್.

ಮಂಡ್ಯ,ನವೆಂಬರ್,10,2023(www.justkannada.in): ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಮಾಡುವುದು ಬೇಡ. ಈ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

ಇಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್, ಟಿಪ್ಪು ಸುಲ್ತಾನ್‌ 273ನೇ ಜನ್ಮದಿನದ ಆಚರಣೆ ಮಾಡುತ್ತಿದ್ದೇವೆ. ವಿಶ್ವ ಶಾಂತಿಗಾಗಿ ಟಿಪ್ಪು ಆಚರಣೆ ಮಾಡುತ್ತಿದ್ದೇವೆ. ಟಿಪ್ಪು ಜಯಂತಿ ಹೆಸರಿನಲ್ಲಿ ಜನರ ಮನಸು ಕೆಡಿಸುವ ಯತ್ನ ನಡೆದಿದೆ. ಟಿಪ್ಪು ಜಯಂತಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ ಎಂದರು.

ಸರ್ಕಾರದಿಂದ  ಸರ್ಕಾರ ಮುಂದೆ ನಾವು ಟಿಪ್ಪು ಜಯಂತಿ ಆಚರಣೆ ಪ್ರಸ್ತಾಪ ಮಾಡಿಲ್ಲ. ಸರ್ಕಾರದ ಟಿಪ್ಪು ಜಯಂತಿ ಆಚರಣೆ ವಿರುದ್ದ ನಾನು ಇದ್ದೇನೆ.  ಟಿಪ್ಪು ಜಯಂತಿ ಮಾಡಲ್ಲ ಎಂದಾಗಲೂ ಸ್ವಾಗತಿಸಿದ್ದೇವೆ.  ಯಾವುದೇ ಕಾರಣಕ್ಕೂ ಟಿಪ್ಪು  ಜಯಂತಿ ಆಚರಣೆ ಮಾಡಬಾರದು. ಟಿಪ್ಪು ಜಯಂತಿ ಆಚರಣೆ ಮಾಡುವ ಶಕ್ತಿ ಅನುಯಾಯಿಗಳಿಗೆ ಇದೆ. ಟಿಪ್ಪು ವಿಚಾರದಲ್ಲಿ ರಾಜಕೀಯ ಬೇಡ ಎಂದು ತನ್ವೀರ್ ಸೇಠ್ ತಿಳಿಸಿದರು.

Key words: Do not -celebrate -Tippu Jayanti – government- MLA-Tanveer Sait.