ಕಾವೇರಿ- ಪೆನ್ನಾರ್, ಕೃಷ್ಣಾ-ಪೆನ್ನಾರ್ ನದಿ ಜೋಡಣೆಗೆ ಸಮ್ಮತಿ- ಬಜೆಟ್ ನಲ್ಲಿ ಘೋಷಣೆ.

ನವದೆಹಲಿ,ಫೆಬ್ರವರಿ,1,2022(www.justkannada.in)  ಕಾವೇರಿ –ಪೆನ್ನಾರ್, ಕೃಷ್ಣಾ – ಪೆನ್ನಾರ್  ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ  ಸಮ್ಮತಿಸಿದ್ದು,ಈ ಬಗ್ಗೆ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

ಇಂದು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸುತ್ತಿದ್ದು,  ಈ ವಿಷಯವನ್ನು ಘೋಷಣೆ ಮಾಡಿದ್ದಾರೆ. ರೈತರ ಕೃಷಿ ಕಾರ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾವೇರಿ-ಪೆನ್ನಾರ್ ನದಿ ಜೋಡಣೆ ಹಾಗೂ ಕೃಷ್ಣಾ-ಪೆನ್ನಾರ್ ನದಿ ಜೋಡಣೆಗೆಳನ್ನು ಪ್ರಾರಂಭಿಸೋದಾಗಿ ಘೋಷಣೆ ಮಾಡಿದರು.

ಇದಕ್ಕಾಗಿ ಕೇಂದ್ರ ಬಜೆಟ್ ನಲ್ಲಿ ಹಣ ಮೀಸಲಿಡಲಾಗಿದೆ. ಇದಲ್ಲದೇ 2023ರ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಸಹ ಘೋಷಣೆ ಮಾಡಲಾಗಿದೆ. ಈ ಮೂಲಕ ರಾಸಾಯನಿಕ ಮುಕ್ತ ಭಾರತ ನಿರ್ಮಾಣಕ್ಕಾಗಿ ಕರೆ ನೀಡಲಾಗಿದೆ.

ಏರ್ ಇಂಡಿಯಾ ಮೇಲಿನ ಬಂಡವಾಳ ಸಂಪೂರ್ಣ ಹಿಂತೆಗೆಯಲಾಗಿದೆ. ಪಿಎಂ ಗತಿ ಶಕ್ತಿ ದೇಶದ ಆರ್ಥಿಕತೆಗೆ ವೇಗ ನೀಗಲಿದೆ. ದೇಶದ ಜಿಡಿಪಿ ಶೇ.9.2ರಷ್ಟು ಬೆಳವಣಿಗೆ. ಸಣ್ಣ ಉದ್ದಿಮೆಗಳಿಗೆ 2023ರ ಮಾರ್ಚ್ ವರೆಗೂ ಕ್ರೆಡಿಟ್ ಸ್ಕೀಂ ವಿಸ್ತರಣೆ. 50 ಸಾವಿರ ರೂ. ನಿಧಿಯ ಮೊತ್ತ 5 ಲಕ್ಷ ಕೋಟಿಗೆ ಹೆಚ್ಚಳ. ಕೌಶಲಾಭಿವೃದ್ಧಿಗೆ ಆನ್ ಲೈನ್ ತರಬೇತಿಗೆ ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Key words: Kaveri-Pennar –Budget-nirmala sitharaman

ENGLISH SUMMARY…

Approval given for joining of Kaveri-Pennar, Krishna-Pennar rivers: Announced in budget
New Delhi, February 1, 2022 (www.justkannada.in): The Government of India has given its nod for the project to join Kaveri-Pennar and Krishna-Pennar rivers. Union Finance Minister Nirmala Seetharaman announced it in the budget today.
The Finance Minister presented the Union budget today in the Parliament where this announcement was made. Keeping in mind the interest and benefit of the farmers and agriculture approval is given to join the Kaveri-Pennar, Krishna-Pennar rivers, she announced.
Allocation is made in the budget for this purpose. Also, 2023 is announced as International Millets Year, giving a call to make India a chemical-free nation.
Capital investment in Air India has been completely drawn. Ensuring 9.2% GDP, an extension of credit scheme to small scale industries till March 2023, increasing Rs.50,000 grants to Rs.5 lakh crore, approval to conduct online skill development training were also announced by the finance minister in today’s budget.
Keywords: Finance Minister Nirmala Seetharaman/ Union Budget/ river joining