ಅಕ್ಷಯ್ ಕುಮಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ‘ರಾಮ್ ಸೇತು’ ರಿಲೀಸ್ ಡೇಟ್ ಫಿಕ್ಸ್

ಬೆಂಗಳೂರು, ಫೆಬ್ರವರಿ 01, 2022 (www.justkannada.in): ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಅಕ್ಷಯ್‌ ನಟಿಸಿರುವ ‘ರಾಮ್‌ ಸೇತು’ ಸಿನಿಮಾ ದೀಪಾವಳಿ ದಿನವೇ ಬಿಡುಗಡೆಯಾಗಲಿದೆ.

ಹೌದು. ಈ ದೀಪಾವಳಿಗೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ರಿಂದ ಅಭಿಮಾನಿಗಳಿಂದ ಉಡುಗೊರೆಯೊಂದು ಸಿಗಲಿದೆ.

ಈ ಬಗ್ಗೆ ನಟ ಟ್ವಿಟರ್‌ನಲ್ಲಿ ಮಾಹಿತಿ ಕೊಟ್ಟಿದ್ದು, ಸಿನಿಮಾ ಸೆಟ್‌ನ ವಿಡಿಯೋವೊಂದನ್ನೂ ಹಂಚಿಕೊಂಡಿದ್ದಾರೆ. ಈ ಮೂಲಕ ಬಹಳ ದಿನಗಳ ಬಳಿಕ ಅಕ್ಕಿ ಸಿನಿಮಾ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ.