ನವೆಂಬರ್ 4ಕ್ಕೆ ‘ಕಥಾ ಸಂಗಮ’ ಟೀಸರ್ ರಿಲೀಸ್ !

ಬೆಂಗಳೂರು, ಅಕ್ಟೋಬರ್ 29, 2019 (www.justkannada.in): ರಿಷಬ್ ಶೆಟ್ಟಿ ಮುಂದಿನ ಚಿತ್ರ ಕಥಾ ಸಂಗಮ ಸಿನಿಮಾದ ಟ್ರೈಲರ್ ನವೆಂಬರ್ 4 ಕ್ಕೆ ರಿಲೀಸ್ ಆಗಲಿದೆ.

ಈ ಸಿನಿಮಾದಲ್ಲಿ ರಿಷಬ್ ಪ್ರಮುಖ ನಿರ್ದೇಶಕರಾದರೂ ಅವರಲ್ಲದೆ ಒಟ್ಟು ಏಳು ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶಿಸಿರುವುದು ವಿಶೇಷವಾಗಿದೆ.

ಈ ಸಿನಿಮಾದಲ್ಲಿ ಹರಿಪ್ರಿಯಾ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಸುಧಾ ಬೆಳವಾಡಿ, ಪ್ರಮೋದ್ ಶೆಟ್ಟಿ ಮತ್ತಿತರರು ಅಭಿನಯಿಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಉಡುಗೊರೆಯಾಗಿ ಚಿತ್ರದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ.