ಡಿಕೆ ಶಿವಕುಮಾರ್ ಬೆಂಬಲಿಗರ ವಿರುದ್ದ ಹಲ್ಲೆ ಆರೋಪ: ಡಿಸಿಪಿ ಗನ್ ಮ್ಯಾನ್ ನಿಂದ ದೂರು ದಾಖಲು…

ಬೆಂಗಳೂರು,ಅ,29,2019(www.justkannada.in):  ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸ್ವಾಗತಿಸಲು ಬಂದಿದ್ದ ಬೆಂಬಲಿಗರ ವಿರುದ್ದ ಹಲ್ಲೆ ಆರೋಪ ಕೇಳಿ ಬಂದಿದ್ದು ಈ ಕುರಿತು ಈಶಾನ್ಯ ವಿಭಾಗ ಡಿಸಿಪಿ ಅವರ ಗನ್ ಮ್ಯಾನ್  ದೂರು ನೀಡಿದ್ದಾರೆ.

ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ನಿಂದಿಸಿದ್ದಾರೆ ಎಂದು ಆರೋಪಿಸಿ ಈಶಾನ್ಯ ವಿಭಾಗ ಡಿಸಿಪಿ ಅವರ ಗನ್ ಮ್ಯಾನ್ ಭರಮಪ್ಪ ಎಂಬುವವರು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಡಿ.ಕೆ ಶಿವಕುಮಾರ್ ಸ್ವಾಗತದ ವೇಳೆ ವಾಹನ ತೆರಳಲು ಆಗದ ರೀತಿ ಟ್ರಾಫಿಕ್ ಉಂಟಾಗಿತ್ತು. ಈ ವೇಳೆ ಟೋಲೆ ಗೇಟ್ ಬಳಿ 15 ಮಂದಿ ಕಾಂಗ್ರೆಸ್ ಬಾವುಟ ಹಿಡಿದು ನಿಂತಿದ್ದರು. ಟ್ರಾಫಿಕ್ ಹಿನ್ನೆಲೆ ಪಕ್ಕಕ್ಕೆ ಸರಿಯುವಂತೆ ಸೂಚನೆ ನೀಡಿದ್ದೆ. ಆದರೆ ಅವರು ನನ್ನ ಮೇಲೆ ದಾಳಿ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಿ ಭರಮಪ್ಪ ದೂರು ನೀಡಿದ್ದಾರೆ. ಸೆಕ್ಷನ್ 353 ರಡಿ ಪ್ರಕರಣ ದಾಖಲಾಗಿದೆ.

Key words: DK Sivakumar – supporters- assault-Complaint – DCP -Gunman.