Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page  ಕೆಎಎಸ್ ಅಧಿಕಾರಿ ಡಾ.ಬಿ. ಸುಧಾ ಅವರ ಮೈಸೂರಿನ ಸಂಬಂಧಿಕರ ಮನೆ ಮೇಲೂ ಎಸಿಬಿ ದಾಳಿ…

 ಕೆಎಎಸ್ ಅಧಿಕಾರಿ ಡಾ.ಬಿ. ಸುಧಾ ಅವರ ಮೈಸೂರಿನ ಸಂಬಂಧಿಕರ ಮನೆ ಮೇಲೂ ಎಸಿಬಿ ದಾಳಿ…

ಮೈಸೂರು,ನವೆಂಬರ್,7,2020(www.justkannada.in): ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕೆಎಎಸ್ ಅಧಿಕಾರಿ ಡಾ.ಬಿ ಸುಧಾ ಅವರ ಬೆಂಗಳೂರಿನ ಕೋಡಿಹಳ್ಳಿಯಲ್ಲಿರುವ ನಿವಾಸ ಸೇರಿ ಒಟ್ಟು 6 ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದು, ಅಪಾರ ಪ್ರಮಾಣದ ಚಿನ್ನಾಭರಣ, ನಗದು ಪತ್ತೆಯಾಗಿದೆ.jk-logo-justkannada-logo

ಈ ನಡುವೆ ಕೆಎಎಸ್ ಅಧಿಕಾರಿ ಸುಧಾ ಅವರ ಮೈಸೂರಿನ ಸಂಬಂಧಿಕರ ಮನೆ ಮೇಲೂ ಎಸಿಬಿ ದಾಳಿ ನಡೆಸಿ ದಾಖಲೆಗಳನ್ನ ವಶಕ್ಕೆ ಪಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರಿನ ಬೆಮೆಲ್ ಲೇಔಟ್ ನಲ್ಲಿರುವ ಅಧಿಕಾರಿ ಸುಧಾ ಅವರ ಸಂಬಂಧಿ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ದಾಳಿ ಅಂತ್ಯವಾಗಿದೆ.KAS officer –ACB- attack - bangalore

ಇನ್ನು ಅಧಿಕಾರಿಗಳು ಹಲವು ದಾಖಲೆಗಳನ್ನ ಪ್ರಿಂಟರ್ ಲ್ಯಾಪ್ ಟಾಪ್ ಅನ್ನ ವಶಕ್ಕೆ ಪಡೆದುಕೊಂಡು ಕೊಂಡೊಯ್ದಿದ್ದಾರೆ ಎನ್ನಲಾಗಿದೆ.

Key words: KAS Officer -Dr.B sudha-ACB -attack –mysore- relatives’- house