Sunday, August 2, 2026

BDA Apartments

Home Front Page ನಾಳೆ ಕರ್ನಾಟಕ ‘ರಾಜ್ಯ ವಿಪ್ರ ಫೋಟೊ ಮತ್ತು ವಿಡೀಯೋಗ್ರಾಫರ್ಸ್ ಅಸೋಸಿಯೇಷನ್’ ಸಂಘಟನೆ ಉದ್ಘಾಟನಾ ಸಮಾರಂಭ….

ನಾಳೆ ಕರ್ನಾಟಕ ‘ರಾಜ್ಯ ವಿಪ್ರ ಫೋಟೊ ಮತ್ತು ವಿಡೀಯೋಗ್ರಾಫರ್ಸ್ ಅಸೋಸಿಯೇಷನ್’ ಸಂಘಟನೆ ಉದ್ಘಾಟನಾ ಸಮಾರಂಭ….

ಬೆಂಗಳೂರು,ಏಪ್ರಿಲ್,9,2021(www.justkannada.in): ನಾಳೆ(ಏ.9) ಕರ್ನಾಟಕ ರಾಜ್ಯ ವಿಪ್ರ ಫೋಟೊ ಮತ್ತು ವಿಡೀಯೋಗ್ರಾಫರ್ಸ್ ಅಸೋಸಿಯೇಷನ್ ಸಂಘಟನೆ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ.Illegally,Sand,carrying,Truck,Seized,arrest,driver

ನಗರದ ಬಿಎಂಎಸ್ ಕಾಲೇಜು ಎದುರು ಬಸವನಗುಡಿ ಮುಖ್ಯರಸ್ತೆಯಲ್ಲಿರುವ ಶ್ರೀ ಪುತ್ತಿಗೆ ಮಠದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು,  ಶ್ರೀ ಸುಗುಣೇಂದ್ರತೀರ್ಥ  ಶ್ರೀ ಪಾದಂಗಳವರು ಇವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸಚ್ಛಿದಾನಂದ ಮೂರ್ತಿ , ಹಿರಿಯ ಪತ್ರಕರ್ತ ವೆಂಕಟನಾರಾಯಣ, ಅಖಿಲ ಕರ್ನಾಟಕ ಮಾಧ್ವ ಮಹಾಸಭಾ  ಅಧ್ಯಕ್ಷರಾದ ಮುರುಳೀಧರ ವಿಪ್ರ ಬಿಸಿನೆಸ್ ಫೋರಂ ಅಧ್ಯಕ್ಷ ಶ್ರೀ ಜಯತೀರ್ಥ ಕೆ.ಆರ್ ಅವರು ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ  ಬಿ.ಕೆ ಸುಬ್ಬುರಾವ್, ಮೈಸೂರು, ಬಾಬು ಜಿ.ಎಸ್ ಮೈಸೂರು,  ಶ್ರೀನಿವಾಸ್ ರಾವ್, ಬೆಂಗಳೂರು, ಸಿ.ಬಿ ಕಾಶೀನಾಥ್ ಬೆಂಗಳೂರು, ಸಂದೀಪ್ ಹೊಳ್ಳ ಉಜಿರೆ, ಕೆಂಗಲ್ ವೆಂಕಟೇಶ್ ಸಿರುಗುಪ್ಪಾ ಇವರನ್ನ ಸನ್ಮಾನಿಸಲಾಗುತ್ತದೆ.karnataka-state-vipra-photo-and-videographers-association-innuagration

ಇದೇ ವೇಳೆ  ಶ್ರೀ ಯದುಗಿರಿ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಅವರು ಸಂಘಟನೆಯ ವೆಬ್ ಸೈಟ್ ಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿರಲಿದ್ದಾರೆ.

Key words: Karnataka State- vipra- Photo and Videographers Association-innuagration