ಹೂಡಿಕೆಗೆ ಕರ್ನಾಟಕ ಮನೆಯ ವಾತಾವರಣ ಇರುವ ರಾಜ್ಯ: ಎಲ್ಲಾ ಸೌಲಭ್ಯ ನೀಡುತ್ತೇವೆ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ನವೆಂಬರ್,2,2022(www.justkannada.in): ಹೂಡಿಕೆಗೆ ಕರ್ನಾಟಕ ಮನೆಯ ವಾತಾವರಣ ಇರುವ ರಾಜ್ಯ. ರಾಜ್ಯದಲ್ಲಿ ಹೂಡಿಕೆದಾರರಿಗೆ ಎಲ್ಲಾ ಸೌಲಭ್ಯವನ್ನ ನೀಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಆರ್ಥಿಕ ಬೆಳವಣಿಗೆ ದುಪ್ಪಟ್ಟು ಮಾಡುವ ಗುರಿ  ಹೊಂದಲಾಗಿದೆ.  ನಮ್ಮಲ್ಲಿ ಡಿಆರ್ ಡಿಓ ಹೆಚ್ಎ ಎಲ್ ಸೇರಿದಂತೆ ಅನೇಕ ಸಂಸ್ಥೆಗಳಿವೆ ಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳುವ ಕೆಲಸವಾಗುತ್ತಿದೆ  ನಿಮ್ಮ ಮನೆ ಅಂತಾ ಬಂಡವಾಳ ಹೂಡಿಕೆಗೆ ಬನ್ನಿ ಎಂದು ಆಹ್ವಾನಿಸಿದರು.i

ರಾಜ್ಯದಲ್ಲಿ ಹೂಡಿಕೆದಾರರಿಗೆ ಎಲ್ಲಾ ಸೌಲಭ್ಯವನ್ನ ನೀಡುತ್ತೇವೆ. ನೀವು ಹೆಚ್ಚು ಉದ್ಯೋಗ ನೀಡಿದರೇ ಹೆಚ್ಚು ಹಣ ನೀಡುತ್ತೇವೆ  ಉದ್ಯೋಗಿಗಳು ಖುಷಿಯಾಗಿದ್ದರೇ ಉತ್ಪಾದನೆ ಹೆಚ್ಚಾಗುತ್ತದೆ’ ಹೂಡಿಕೆಗೆ ಕರ್ನಾಟಕ ಮನೆಯ ವಾತಾವರಣ ಇರುವ ರಾಜ್ಯ. ಕೋವಿಡ್ ಬಳಿಕ ದೇಶದ ಆರ್ಥಿಕ ಸ್ಥಿತಿ ಸಾಕಷ್ಟು ಬದಲಾವಣೆಯಾಗಿದೆ. 7 ಲಕ್ಷ ಕೋಟಿಗೂ ಹೆಚ್ಚು ಬಂಡವಳ ಹೂಡಿಕೆಯಾಗುತ್ತಿದೆ ಎಂದರು.

Key words: Karnataka – home- state- investment-facilities- CM -Basavaraja Bommai.