ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ.

ಕಲಬುರಗಿ,ನವೆಂಬರ್,2,2022(www.justkannada.in):  15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಕಲಬುರಗಿ  ಜಿಲ್ಲೆಯಲ್ಲಿ ನಡೆದಿದೆ.

ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದ್ದು ನಿನ್ನೆ ಬಾಲಕಿಯ ಶವ ಕಬ್ಬಿನ ಗದ್ಧೆಯಲ್ಲಿ ಪತ್ತೆಯಾಗಿದೆ.

ಈ ಕುರಿತು  ಮಾತನಾಡಿ ಮಾಹಿತಿ ನೀಡಿದ ಕಲಬುರಗಿ ಎಸ್ಪಿ ಇಶಾ ಪಂತ್, ಆರೋಪಿ ಬಗ್ಗೆ ಕೆಲ ಮಾಹಿತಿ ಸಿಕ್ಕಿವೆ. ಆರೋಪಿ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಆದಷ್ಟು ಬೇಗನೆ ಆರೋಪಿಯನ್ನು ಪತ್ತೆ ಮಾಡುತ್ತೇವೆ. ಈ ಕೃತ್ಯದಿಂದ ಮನಸ್ಸಿಗೆ ಬಹಳ ನೋವಾಗಿದೆ.  ಆರೋಪಿಗಳು ಯಾರೇ ಆದರೂ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

Key words: kalburgi- girl – raped -murder