ಪರಿಹಾರ ನಿರೀಕ್ಷೆ, ಸಂಪುಟದಲ್ಲಿ ನಿರಾಸೆ: ಪ್ರಧಾನಿಗೆ ಮಾಹಿತಿ ನೀಡಿದ ಡಿವಿಎಸ್, ವಿಶೇಷ ಮಾತುಕತೆಯೇ ನಡೆದಿಲ್ಲ

ನವದೆಹಲಿ:ಆ-14: ಮಂಗಳವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ವಿಶೇಷ ಚರ್ಚೆ ನಡೆಯದಿರುವುದು ನಿರಾಸೆಗೆ ಕಾರಣವಾಗಿದೆ. ನೆರೆ ಸ್ಥಿತಿ-ಗತಿ ಬಗ್ಗೆ ಸಚಿವ ಡಿ.ವಿ. ಸದಾನಂದ ಗೌಡ ಅವರು ಗಮನ ಸೆಳೆದರಾದರೂ ರಾಜ್ಯಕ್ಕೆ ಅನುಕೂಲವಾಗುವಂಥ ಯಾವುದೇ ನಿರ್ಧಾರ ಹೊರಬೀಳಲಿಲ್ಲ. ದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಆರಂಭವಾಗುತ್ತಿದ್ದಂತೆ ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಿ ವಿಚಾರಿಸಿದಾಗ ಮಾಹಿತಿ ಹಂಚಿಕೊಂಡ ಡಿವಿಎಸ್, ಪ್ರವಾಹದ ಬೀಕರತೆ, ಆಸ್ತಿ-ಪಾಸ್ತಿ ನಾಶ, ಸಾವು-ನೋವು, ಜನಜೀವನ ಅಸ್ತವ್ಯಸ್ತಗೊಂಡಿರುವುದು ಸೇರಿ ಅಪಾರ ಪ್ರಮಾಣದ ಕೃಷಿಭೂಮಿ ನಾಶವಾಗಿರುವ ಬಗ್ಗೆ ವಿವರಣೆ ನೀಡಿದರು.

ಪ್ರವಾಹ ಪರಿಸ್ಥಿತಿಗೆ 17 ಜಿಲ್ಲೆಗಳು ನಲುಗಿ ಹೋಗಿವೆ. ಅಲ್ಲಿನ ಜನರ ಭವಿಷ್ಯದ ಬಗ್ಗೆಯೇ ಆತಂಕ ಉಂಟಾಗಿದೆ. ರಾಷ್ಟ್ರೀಯ ಮತ್ತು ರಾಜ್ಯದ ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ಮೂಲಕ ಜನರ ನೆರವಿಗೆ ಧಾವಿಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದರು. ಸದ್ಯ ಕೇಂದ್ರ ಸರ್ಕಾರ -ಠಿ;126 ಕೋಟಿ ಪರಿಹಾರ ನೀಡಿದ್ದು, ಮುಂದಿನ ದಿನಗಳಲ್ಲಿ ಉನ್ನತಾಧಿಕಾರಿಗಳ ತಂಡ ರಾಜ್ಯಕ್ಕೆ ಭೇಟಿ ನೀಡಿ ಹೆಚ್ಚಿನ ಪರಿಹಾರ ನೀಡುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ಸಿಎಂ ಪ್ರಸ್ತಾವನೆಯೊಂದನ್ನು ಪ್ರಧಾನಿಗೆ ಸಲ್ಲಿಸಿ, ಪರಿಹಾರಕ್ಕಾಗಿ ಮನವಿ ಮಾಡಲಿದ್ದಾರೆಂದು ಮೂಲಗಳು ತಿಳಿಸಿವೆ.

ಅಮಿತ್ ಷಾ, ನಿರ್ಮಲಾ ಸೀತಾರಾಮನ್ ಅವರಿಂದಲೂ ಮಾಹಿತಿ ಪಡೆದಿರುವ ಪ್ರಧಾನಿ, ಕೇಂದ್ರದಿಂದ ಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ. ಎನ್​ಡಿಆರ್​ಎಫ್ ಸಿಬ್ಬಂದಿ ಕಾರ್ಯನಿರ್ವಹಣೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಮಳೆ ಕಡಿಮೆಯಾದ ಕೂಡಲೇ ಗೃಹ ಸಚಿವಾಲಯದ ತಂಡ ರಾಜ್ಯಕ್ಕೆ ಭೇಟಿ ಕೊಟ್ಟು, ತಜ್ಞ ವರದಿಯನ್ನು ಸಚಿವರಿಗೆ ಸಲ್ಲಿಸಲಿದೆ. ಅದರ ಆಧಾರದಲ್ಲಿ ಕೇಂದ್ರ ವಿಶೇಷ ಅನುದಾನ ನೀಡಲಿದೆ.

| ಡಿ.ವಿ. ಸದಾನಂದ ಗೌಡ ಕೇಂದ್ರ ಸಚಿವ
ಕೃಪೆ:ವಿಜಯವಾಣಿ

ಪರಿಹಾರ ನಿರೀಕ್ಷೆ, ಸಂಪುಟದಲ್ಲಿ ನಿರಾಸೆ: ಪ್ರಧಾನಿಗೆ ಮಾಹಿತಿ ನೀಡಿದ ಡಿವಿಎಸ್, ವಿಶೇಷ ಮಾತುಕತೆಯೇ ನಡೆದಿಲ್ಲ
karnataka-floods-central-minister-karnataka-floods-flood-relief-fund-d-v-sadanandagowda