ಮಳೆ ಸಂತ್ರಸ್ತರ ಪಾಲಿಗೆ ಸತ್ತಂತಿರುವ ಸರಕಾರ: ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ

ಬೆಂಗಳೂರು, ಆಗಸ್ಟ್ 16, 2020 (www.justkannada.in): 22 ಜಿಲ್ಲೆಗಳ ಸಂತ್ರಸ್ತರ ಪಾಲಿಗೆ ಸರ್ಕಾರ ಸತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೃದಯ ಇದ್ದರೆ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸಿ. ಕಳೆದ ವರ್ಷ ಅತಿವೃಷ್ಟಿಗೆ ಮುಖ್ಯಮಂತ್ರಿಯವರು ಕೇಳಿದ್ದು 35.160 ಸಾವಿರ ಕೋಟಿ ರೂಪಾಯಿ. ಆದರೆ, ಪ್ರಧಾನಿ ಮೋದಿ ಕೊಟ್ಟಿದ್ದು 1869 ಕೋಟಿ ರೂಪಾಯಿ ಮಾತ್ರ ಎಂದು ಹೇಳಿದ್ದಾರೆ ಎಂದು ಟೀಕಿಸಿದ್ದಾರೆ.

ಶೆಡ್ ಗಳಲ್ಲಿ ನರಳುತ್ತಿರುವ ಸಂತ್ರಸ್ತರು, ಕುಸಿದ ಮನೆಗಳು, ಹಾಳಾದ ರಸ್ತೆಗಳು, ಮುರಿದ ಸೇತುವೆಗಳು ಬಿಜೆಪಿ ಸರ್ಕಾರದ ವರ್ಷದ ಸಂಭ್ರಮವನ್ನು ಅಣಕಿಸುವಂತೆ ಹಾಗೆಯೇ ಇವೆ. ಕಣ್ಣು ಬಿಟ್ಟು ನೋಡಿ ಎಂದು ಆಗ್ರಹಿಸಿದ್ದಾರೆ.