ಸಹಕಾರ ಸಚಿವರ ಪತ್ರದಿಂದ, ಈಗ 18 ಅಧಿಕಾರಿಗಳು ಆಟಕ್ಕೂ ಉಂಟು ಲೆಕ್ಕಕ್ಕೂ ಉಂಟು..!

 

ಬೆಂಗಳೂರು, ಮೇ 28, 2020 : (www.justkannada.in news) ಸಹಕಾರ ಇಲಾಖೆಗೆಂದು ನೇಮಕಗೊಂಡು ಬಳಿಕ ಇತರೆ ಇಲಾಖೆಗೆ ನಿಯೋಜನೆ ಮೇಲೆ ತೆರಳಿದ್ದ ಅಧಿಕಾರಿಗಳನ್ನು ಮತ್ತೆ ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಸೂಚಿಸಲಾಗಿದೆ.

ಕೆಲ ದಿನಗಳ ಹಿಂದೆಯಷ್ಟೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಇಲಾಖೆ ಸಭೆ ನಡೆಸುವ ವೇಳೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಕೊರತೆ ಎದುರಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ, ನೇಮಕಗೊಂಡವರಲ್ಲಿ ಬಹುತೇಕರು , ‘ ಆಟಕ್ಕುಂಟು ಲೆಕ್ಕಕ್ಕಿಲ್ಲ ‘ ಎಂಬಂತೆ ನಿಯೋಜನೆ ಮೇರೆಗೆ ಮಾತೃ ಇಲಾಖೆಯಿಂದ ಬೇರೆಡೆಗೆ ತೆರಳಿದ್ದು ತಿಳಿಯಿತು.

ಆಗ ಕೂಡಲೇ ಮುಖ್ಯಮಂತ್ರಿಗೆ ಪತ್ರ ಬರೆದ ಸಚಿವ ಸೋಮಶೇಖರ್, ಇಲಾಖೆಯಲ್ಲಿನ ಸಮಸ್ಯೆ ವಿವರಿಸಿ ಅಧಿಕಾರಿಗಳನ್ನು ಮತ್ತೆ ಸಹಕಾರ ಇಲಾಖೆಗೆ ವಾಪಾಸ್ ಕಳುಹಿಸಲು ಕೋರಿಕೊಂಡರು.

ಈ ಪತ್ರಕ್ಕೆ ಸ್ಪಂಧಿಸಿದ ಸಿಎಂ, ಇದೀಗ ಸಹಕಾರ ಇಲಾಖೆಗೆ ನೇಮಕಗೊಂಡು ಬೇರೆಡೆ ನಿಯೋಜನೆ ಮೇಲೆ ತೆರಳಿದ್ದವರನ್ನು ಮತ್ತೆ ಮಾತೃ ಇಲಾಖೆಗೆ ಕಳುಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

 karnataka-co.operative-minister-somashekar-officers-transfers-back

ಪರಿಣಾಮ ಮುಖ್ಯಮಂತ್ರಿಗಳ ಕಚೇರಿ ಸೇರಿದಂತೆ ಇತರೆ ಸಚಿವರ ಬಳಿ, ನಗರ ಪಾಲಿಕೆಗಳಲ್ಲಿ ನಿಯೋಜನೆಗೊಂಡಿದ್ದವರು ಇದೀಗ ಮತ್ತೆ ಸಹಕಾರ ಇಲಾಖೆಗೆ ಮರುಳುವಂತಾಗಿದೆ. ಇದರಿಂದ ವಿವಿಧೆಡೆ ನಿಯೋಜನೆ ಮೇಲಿದ್ದ 18 ಮಂದಿ ಅಧಿಕಾರಿಗಳು ಈಗ ಸಹಕಾರ ಇಲಾಖೆಗೆ ಹಿಂದಿರುವುದು ಅನಿವಾರ್ಯವಾಗಿದೆ.

key words : karnataka-co.operative-minister-somashekar-officers-transfers-back