ಮೈಸೂರು,ಸೆಪ್ಟಂಬರ್,11,2021(www.justkannada.in): ಕೇಂದ್ರದ ಮೂರು ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೆಪ್ಟೆಂಬರ್ 27ಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಬೆಂಬಲ ನೀಡುತ್ತಿದೆ. ಸೆಪ್ಟಂಬರ್ 27ಕ್ಕೆ ಕರ್ನಾಟಕ ಬಂದ್ ಮಾಡಲಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಕುರುಬೂರು ಶಾಂತಕುಮಾರ್, ದೇಶದಲ್ಲಿ ಆಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನಸಾಮಾನ್ಯರ ಜೀವನದ ಮೇಲೆ ಹೊಡೆತ ಬಿದ್ದಿದೆ. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.
ಕಬ್ಬು ಬೆಳೆಗಾರಿಗೆ ನ್ಯಾಯ ಸಿಗಬೇಕು. ಕಬ್ಬಿನ ಬೆಲೆ ಪರಿಷ್ಕರಣೆ ಆಗಬೇಕಿದೆ. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು. ಹೀಗಾಗಿ ಸೆ.27 ರಂದು ಕರ್ನಾಟಕ ಬಂದ್ ಗೆ ಕರೆ ನಿಡಲಾಗಿದೆ. ಆನೇಕ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ENGLISH SUMMARY…
Karnataka bundh on Sept. 27 opposing Union Govt.’s amended agriculture bill – Kurubur Shantakumar
Mysuru, September 11, 2021 (www.justkannada.in): Karnataka State Sugarcane Growers’ Association (KSSGA) President Kurubur Shantakumar today informed that KSSGA will support the call for Karnataka bundh on September 27 opposing the Govt. of India’s three amended agricultural bills, given by the Samyukta Kisan Morcha.
Speaking in Mysuru today he said that the prices of essential commodities are skyrocketing in the country making the lives of common people disastrous. “We will take out a protest demanding to announce the supportive price for farmers’ produce,” he said.
He also informed that their protest is to seek justice for sugarcane growers, and supportive price for farmers produce. Hence, several organizations have extended their support to the Karnataka bundh.
Keywords: Karnataka State Sugarcane Growers’ Association/ Kurubur Shantakumar/ Karnataka bundh/ support/ September 27
Key words: Karnataka Bandh- Sept. 27 – protest –mysore- Kuruburu Shanthakumar.