Friday, July 31, 2026

BDA Apartments

Home Cinema ಕೊರೊನಾ ಸಂಕಷ್ಟ ಕಾಲದಲ್ಲಿ ಕರ್ನಾಟಕದ ನೆರವಿಗೆ ಬಂದ ಕಪಿಲ್ ಶರ್ಮಾ, ಭೂಮಿ ಪಡ್ನೇಕರ್

ಕೊರೊನಾ ಸಂಕಷ್ಟ ಕಾಲದಲ್ಲಿ ಕರ್ನಾಟಕದ ನೆರವಿಗೆ ಬಂದ ಕಪಿಲ್ ಶರ್ಮಾ, ಭೂಮಿ ಪಡ್ನೇಕರ್

ಬೆಂಗಳೂರು, ಮೇ 28, 2021 (www.justkannada.in): ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಮತ್ತು ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ ಒಟ್ಟಾಗಿ ಕರ್ನಾಟಕದ ನೆರವಿಗೆ ಧಾವಿಸಿದ್ದಾರೆ.

ಕೊರೊನಾ ರೋಗಿಗಳ ಸಹಾಯ ನಿಂತಿರುವ ಭೂಮಿ ಮತ್ತು ಕಪಿಲ್ ಈಗ ಕರ್ನಾಟಕದ ಕಡೆ ಧಾವಿಸಿದ್ದಾರೆ.

ಶ್ರೀ ರವಿಶಂಕರ್ ಅವರ ಮಿಷನ್ ಜಿಂದಗಿ ಯೊಂದಿಗೆ ಈ ಇಬ್ಬರೂ ಸ್ಟಾರ್ ಗಳು ಕೈ ಜೋಡಿಸಿದ್ದಾರೆ. ಕರ್ನಾಟಕದ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಳ ಸೇರಿದಂತೆ ಇನ್ನು ಕೆಲವು ಆಸ್ಪತ್ರೆಗಳಿಗೆ ಅಕ್ಸಿಜನ್ ಬಸ್ ಗಳನ್ನು ಕಳುಹಿಸಿದ್ದಾರೆ.

ಸದ್ಯ ಕರ್ನಾಟಕ ಜನರ ನೆರವಿಗೆ ಬಂದಿದ್ದೇವೆ. ಈ ಸೇವೆ ಎಲ್ಲಾ ರಾಜ್ಯಗಳಿಗೂ ಮುಂದು ವರೆಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಭೂಮಿ ಪಡ್ನೇಕರ್ ಹೇಳಿದ್ದಾರೆ.