ರೋಹಿತ್ ಶರ್ಮಾಗೆ ಕೋವಿಡ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್’ಗೆ ಕನ್ನಡಿಗ ಮಯಾಂಕ್ ಅಗರ್ವಾಲ್

ಬೆಂಗಳೂರು, ಜೂನ್ 28, 2022 (www.justkannada.in): ಕರ್ನಾಟಕದ ಆರಂಭಿಕ ಮಯಾಂಕ್‌ ಅಗರ್‌ ವಾಲ್‌ ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಭಾರತ ತಂಡದ ನಾಯಕ ರೋಹಿತ್‌ ಶರ್ಮ ಕೊರೊನಾ ಪಾಸಿಟಿವ್‌ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಮಯಾಂಕ್‌ ಅಗರ್‌ ವಾಲ್‌ ಆಯ್ಕೆಯಾಗಿದ್ದಾರೆ.

ರೋಹಿತ್‌ ಶರ್ಮ ಆರಂಭಿಕನಾಗಿ ಕಣಕ್ಕಿಳಿಯಬೇಕಿತ್ತು. ಆದರೆ ಕೊರೊನಾ ಪಾಸಿಟಿವ್‌ ಹಿನ್ನೆಲೆಯಲ್ಲಿ ಅವರ ಸ್ಥಾನ ತುಂಬಲು ಮಯಾಂಕ್‌ ಅಗರ್‌ ವಾಲ್‌ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.

ಜುಲೈ 1ರಂದು ಇಂಗ್ಲೆಂಡ್‌ ಮತ್ತು ಭಾರತ ತಂಡಗಳ ನಡುವಣ ಬಾಕಿ ಇದ್ದ ಏಕೈಕ ಟೆಸ್ಟ್‌ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಯಾಂಕ್‌ ಜೂನ್‌ 27ರಂದು ಇಂಗ್ಲೆಂಡ್‌ ಗೆ ಪ್ರಯಾಣ ಬೆಳೆಸಿದ್ದಾರೆ.