ಕೇರಳದಲ್ಲಿ ಕನ್ನಡ ಶಾಲೆಗಳ ಮುಚ್ಚುವ ಹುನ್ನಾರ ನಡೆಯುತ್ತಿದೆ- ಆರ್.ಅಶೋಕ್ ಆಕ್ರೋಶ

ಹುಬ್ಬಳ್ಳಿ,ಜನವರಿ,9,2026 (www.justkannada.in):  ಕೇರಳದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲೆಯಾಳಂ ಭಾಷೆ ಕಡ್ಡಾಯಕ್ಕೆ ಮುಂದಾದ ಹಿನ್ನೆಲೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಆರ್.ಅಶೋಕ್, ಕೇರಳದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅತಿ ಪ್ರೀತಿ ಕರ್ನಾಟಕ ಸರ್ಕಾರವನ್ನ ಕೇರಳ ರಾಜ್ಯ ಆಳುತ್ತಿದೆ.  ವೇಣುಗೋಪಾಲ್ ಪವರ್ ಫುಲ್ ಜನರಲ್ ಸೆಕರೇಟರಿ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಾರು ಅನ್ನೋದು ಗೊತ್ತಾಗುತ್ತಿಲ್ಲ.  ವೇಣುಗೋಪಾಲ್ ಅವರೇ ರಿಯಲ್ ಮುಖ್ಯಮಂತ್ರಿ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words: Kannada schools, Kerala, R. Ashok