ಕನ್ನಡ ರಾಜ್ಯೋತ್ಸವ: ಕನ್ನಡ ಏಕೀಕರಣ ಹೋರಾಟಗಾರರನ್ನ ನೆನೆದು ಸರ್ಕಾರದ ಸಾಧನೆಯನ್ನ ಬಿಚ್ಚಿಟ್ಟ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು,ನವೆಂಬರ್,1,2022(www.justkannada.in):  ಇಂದು ನಾಡಿನಾದ್ಯಂತ 67ನೇ ಕನ್ನಡ ರಾಜ್ಯೋತ್ಸವದ ಸಂಭ್ರಮವಾಗಿದ್ದು, ಸಡಗರ ಸಂಭ್ರಮದಿಂದ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಕನ್ನಡ ಏಕೀಕರಣ ಹೋರಾಟಗಾರರನ್ನ ಸ್ಮರಿಸಿದ್ದಾರೆ.

ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಂದು ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ.  ಕನ್ನಡನಾಡು ಹೊನ್ನಿನ ಬೀಡು. ಈ ನಾಡಿನಲ್ಲಿ ಹುಟ್ಟಲು 7 ಜನ್ಮ ಪುಣ್ಯ ಬೇಕು. ಕನ್ನಡಿಗರನ್ನ ಒಗ್ಗೂಡಿಸಿ ಏಕೀಕರಣ ಮಾಡಲಾಗಿದೆ. ಕನ್ನಡಕ್ಕೆ ನೈತಿಕ ಮೌಲ್ಯ ಕೊಟ್ಟವರು ಕುವೆಂಪು. ಕನ್ನಡಿಗರು ಸಿಂಹಾವಲೋಕನ ಮಾಡಿಕೊಳ್ಳಬೇಕು. ಎಲ್ಲಾ ಕ್ಷೇತ್ರದಲ್ಲಿ ರಾಜ್ಯ ಮುಂದಿರಬೇಕು. ಕನ್ನಡಿಗರು ಹೆಚ್ಚು ಲಾಭ ಪಡೆಯಬೇಕು ಎಂದು ನುಡಿದರು.

ವಿಶ್ವದಲ್ಲೇ ಕನ್ನಡ ನಾಡು ಅತಿ ಶ್ರೇಷ್ಠವಾದದ್ದು, ರಾಷ್ಟ್ರದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು ಕನ್ನಡ.  ಕನ್ನಡ ನಾಡಿಗೆ ಭಾರತ ಭವಿಷ್ಯ ಬರೆಯುವ ಶಕ್ತಿ ಇದೆ. ವಿಶಾಲತೆ ಕನ್ನಡಿಗರ ಹುಟ್ಟುಗುಣ ಎಂದು ಸಿಎಂ ಬೊಮ್ಮಾಯಿ ಕೊಂಡಾಡಿದರು.

ಕರ್ನಾಟಕದಲ್ಲಿ 10 ಕೃಷಿ ವಲಯಗಳಿವೆ.   ವರ್ಷದ 365 ದಿನವೂ ಕೃಷಿ ನಡೆಯುತ್ತಿದೆ. ಈ ವರ್ಷ ರಾಜ್ಯದಲ್ಲೆಡೆ ಅಂತರ್ಜಲ ಮಟ್ಟ ಏರಿದೆ. ಪ್ರವಾಹದ ವೇಳೆ ಸರ್ಕಾರದಿಂದ 2 ಪಟ್ಟು ಪರಿಹಾರ ನೀಡಿದೆ.  ಮನೆ ಕಟ್ಟಲು ಸರ್ಕಾರದಿಂದ 2 ಲಕ್ಷ ರೂ. ನೀಡಲಾಗಿದೆ. ಕೇಂದ್ರದ ಪರಿಹಾರದ ಜೊತೆ ರಾಜ್ಯ ಸರ್ಕಾರವೂ ಪರಿಹಾರ ನೀಡಿದೆ. ಶಾಲಾ ಕೋಠಡಿಗಳ ಕೊರತೆ ನೀಗಿಸಿಲು 8 ಸಾವಿರ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ವಿವೇಕ ಯೋಜನೆಯಡಿ ಕೊಠಡಿಗಳ ನಿರ್ಮಾಣ ಮಾಡಲಾಗಿದೆ.  ಪ್ರತಿ ಗ್ರಾಮದ ವೃತ್ತಿಪರರಿಗೆ 50 ಸಾವಿರ ಹಣಕಾಸಿನ ನೆರವು ನೀಡಲಾಗುತ್ತಿದೆ. 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ ಭಾಗ್ಯ,  ಮುಂದಿನ 2 ವರ್ಷ 2.5 ಲಕ್ಷ ಹುದ್ಧೆ ಭರ್ತಿಗೆ ಪ್ಲಾನ್ ರೂಪಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: kannada Rajyotsav- CM-Basavaraj bommai- Achievement of Govt