Tuesday, September 29, 2026

BDA Apartments

ಕನ್ನಡ ಭಾಷೆಯೇ ಶ್ರೇಷ್ಠ ಭಾಷೆ : ಶೋಭಾ ರಮೇಶ್ ಅಭಿಮತ BDA JK_Adv BDA Adv
Home Front Page ಕನ್ನಡ ಭಾಷೆಯೇ ಶ್ರೇಷ್ಠ ಭಾಷೆ : ಶೋಭಾ ರಮೇಶ್ ಅಭಿಮತ

ಕನ್ನಡ ಭಾಷೆಯೇ ಶ್ರೇಷ್ಠ ಭಾಷೆ : ಶೋಭಾ ರಮೇಶ್ ಅಭಿಮತ

ಮೈಸೂರು,ನವೆಂಬರ್,8,2024 (www.justkannada.in): ನಮ್ಮ ಮಾತೃ ಭಾಷೆ ಕನ್ನಡವೇ ಕನ್ನಡಿಗರಾದ ನಮ್ಮೆಲ್ಲರಿಗೂ ಶ್ರೇಷ್ಠವಾದ ಭಾಷೆಯಾಗಿದೆ ಎಂದು ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷೆ ಶೋಭ ರಮೇಶ್ ನುಡಿದರು.

ಮೈಸೂರಿನ ಮರುಳೇಶ್ವರ ಭವನದಲ್ಲಿ ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮವನ್ನು ಶೋಭ ರಮೇಶ್  ಅವರು ಉದ್ಘಾಟಿಸಿ ಮಾತನಾಡಿದರು.

ನಮ್ಮ ಮಾತೃಭಾಷೆ ಕನ್ನಡವೇ ನಮ್ಮೆಲ್ಲರಿಗೂ ಶ್ರೇಷ್ಠ ಭಾಷೆ. ಸುಮಾರು 2000ಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಭಾಷೆಯು ಪರಕೀಯ ಭಾಷೆಯ ವ್ಯಾಮೋಹದಿಂದ ಸೊರಗುತ್ತಿದೆ. ಕನ್ನಡ ಬಳಸುವುದೇ ಅವಮಾನ ಎಂಬ ಹಂತಕ್ಕೆ ಇಂದಿನ ಯುವ ಸಮೂಹ ಮತ್ತು ಪೋಷಕರು ಬಂದಿದ್ದಾರೆ. ಇದು ಅತ್ಯಂತ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡ ವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಅದರ ಬೆಳೆವಣಿಗೆಗೆ ನಾವೆಲ್ಲ ದುಡಿಯಬೇಕಾಗಿದೆ. ಬೇರೆ ಭಾಷೆಯನ್ನು ಗೌರವಿಸೋಣ ನಮ್ಮ ಭಾಷೆಯನ್ನು ಪ್ರೀತಿಸಿ, ಬಳಸಿ ಬೆಳೆಸೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಖಜಾಂಚಿ ಅನಿತ ಹೇಮಂತ್ ನಿರ್ದೇಶಕರುಗಳಾದ ಲತಾ ಸುನಿಲ್, ಅನಿತಾ ಮನೋಹರ್,  ಲಲಿತಾ ರಂಗನಾಥ್,  ಮಂಜುಳಾ ಭದ್ರೇಗೌಡ,  ಸವಿತಾ ಟಿ ಎನ್,  ಗೌರಿ ರವಿ, ಸುವರ್ಣ ಮತ್ತು ಹಲವು ಸದಸ್ಯರು ಉಪಸ್ಥಿತರಿದ್ದರು.

Key words: Kannada language, best language, Shobha Ramesh