Tuesday, October 6, 2026

BDA Apartments

immense respect BDA JK_Adv BDA Adv
Home Cinema ಬೆಳ್ಳಿ ತೆರೆಯ ಮೇಲೆ, ನಿಖಿಲ್ ಎಲ್ಲಿದ್ದೀಯಾಪ್ಪ..ಎಂದ ಜೋಡೆತ್ತು…?

ಬೆಳ್ಳಿ ತೆರೆಯ ಮೇಲೆ, ನಿಖಿಲ್ ಎಲ್ಲಿದ್ದೀಯಾಪ್ಪ..ಎಂದ ಜೋಡೆತ್ತು…?

 

ಬೆಂಗಳೂರು, ಮೇ 13, 2019 ( www.justkannada.in news): ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ರಾಜ್ಯ ಮಾತ್ರವಲ್ಲದೆ ದೇಶದ ಗಮನ ಸೆಳೆದದ್ದು ಮಂಡ್ಯ ಕ್ಷೇತ್ರ. ಈ ವೇಳೆ ಚಾಲ್ತಿಗೆ ಬಂದು ಸಖತ್ ವೈರಲ್ ಆದ ‘ನಿಖಿಲ್ ಎಲ್ಲಿದ್ದೀಯಪ್ಪ’ ಮತ್ತು ‘ಜೋಡೆತ್ತು’ ಪದಗಳನ್ನು ಸದ್ಯದಲ್ಲೇ ಸಿನಿಮಾದ ಟೈಟಲ್‌ ಗೆ ಬಳಲಸು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಸಿರು ನಿಶಾನೆ ತೋರಿಸಲಿದೆ.

‘ನಿಖಿಲ್ ಎಲ್ಲಿದ್ದೀಯಪ್ಪ’ ಟೈಟಲ್‌ ಗಾಗಿ ನಿರ್ಮಾಪಕ ಗಣೇಶ್‌ ಹಾಗೂ ‘ಜೋಡೆತ್ತು’ ಟೈಟಲ್‌ ಗೆ ರಾಮಮೂರ್ತಿ ಅರ್ಜಿ ಸಲ್ಲಿಸಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆಯಲ್ಲೇ ಈ ಎರಡೂ ಟೈಟಲ್‌ ನೀಡುವಂತೆ ಹಲವು ಮಂದಿ ಚೇಂಬರ್‌ ಅರ್ಜಿ ಸಲ್ಲಿಸಿದ್ದರು. ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಯಾರೊಬ್ಬರಿಗೂ ಟೈಟಲ್‌ ನೀಡುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿತ್ತು. ಇದೀಗ ಚುನಾವಣೆ ಮುಗಿದಿದ್ದು ಫಲಿತಾಂಶ ಮಾತ್ರ ಬಾಕಿ ಇದೆ. ಆದ್ದರಿಂದ ಟೈಟಲ್ ಗೆ ಅನುಮತಿ ಕೊಡುವಂತೆ ಒತ್ತಡವು ಹೆಚ್ಚುತ್ತಿದೆ ಎನ್ನಲಾಗಿದೆ.

‘ಜೋಡೆತ್ತು’ ಟೈಟಲ್‌ ಅನ್ನು ನಟ ದರ್ಶನ್‌ ಅವರ ಚಿತ್ರಕ್ಕೆ ಬಳಸಲು ರಾಮಮೂರ್ತಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ನಿಖಿಲ್ ಎಲ್ಲಿದ್ದೀಯಪ್ಪ…ಟೈಟಲ್ ಸಿನಿಮಾದಲ್ಲಿ ಯಾರು ನಟಿಸುತ್ತಾರೆ ಎಂಬ ಬಗ್ಗೆ ಇನ್ನು ಮಾಹಿತಿ ಲಭಿಸಿಲ್ಲ..

—

key words : kannada-film-jodethhu-nikhil-ellidiyappa-karnataka-darshan