‘ಏಜ್ ಗ್ಯಾಪ್ ಇದ್ದರೆ ಪರವಾಗಿಲ್ಲ ಬಿಡಿ’: ಕಂಗನಾ ಮತ್ತೊಂದು ವಿವಾದಾತ್ಮಕ ಹೇಳಿಕೆ

ಬೆಂಗಳೂರು, ಫೆಬ್ರವರಿ 11, 2022 (www.justkannada.in): ವಿವಾದಿತ ಹೇಳಿಕೆಗಳ ಮೂಲಕವೇ ಸುದ್ದಿಯಾಗುವ ನಟಿ ಕಂಗನಾ ಮತ್ತೊಂದು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಸಿನಿಮಾ ನಟ-ನಟಿಯರ ನಡುವೆ ಏಜ್​ ಗ್ಯಾಪ್​ ಇದ್ದರೆ ಪರವಾಗಿಲ್ಲ ಬಿಡಿ’ ಎಂದು ಕಂಗನಾ ರಣಾವತ್​ ಹೇಳಿ ಸುದ್ದಿಯಾಗಿದ್ದಾರೆ.

‘ನಮ್ಮ ಸಿನಿಮಾದ ನಟ-ನಟಿಯ ವಯಸ್ಸಿನ ಅಂತರದ ಬಗ್ಗೆ ಅನೇಕರು ನನಗೆ ಎಚ್ಚರಿಕೆ ನೀಡಿದರು. ಆದರೆ ಏಜ್​ ಗ್ಯಾಪ್​ ಇದ್ದರೆ ಪರವಾಗಿಲ್ಲ ಬಿಡಿ’ ಎಂದು ಕಂಗನಾ ಹೇಳಿದ್ದಾರೆ.

ಈ ಮೂಲಕ ಕಂಗನಾ ಸದಾ ಕಾಲ ವಿವಾದ ಮಾಡಿಕೊಳ್ಳುತ್ತಲೇ ಸುದ್ದಿ ಆಗಿದ್ದಾರೆ. 47ರ ಪ್ರಾಯದ ಹೀರೋಗೆ 20ರ ಹರೆಯದ ನಟಿ ಜೋಡಿಯಾದರೆ ಪರವಾಗಿಲ್ಲ ಬಿಡಿ ಎಂದಿದ್ದಾರೆ ಕಂಗನಾ.