ಚಿತ್ರರಂಗ ತೊರೆಯುವ ಮುನ್ಸೂಚನೆ ನೀಡಿದ ಕಾಜಲ್

ಬೆಂಗಳೂರು, ಮೇ 20, 2021 (www.justkannada.in): ದಕ್ಷಿಣ ಭಾರತದ ನಟಿ ಕಾಜಲ್​ ಅಗರ್​ವಾಲ್ ಶೀಘ್ರವೇಚಿತ್ರರಂಗತೊರೆಯುವಸೂಚನೆನೀಡಿದ್ದಾರೆ.

ನನ್ನ ಪತಿ ಚಿತ್ರರಂಗ ತೊರೆಯಲು ಹೇಳಿದರೆ ನಾನು ಹಾಗೆಯೇ ಮಾಡುತ್ತೇನೆ ಎಂದಿದ್ದಾರೆ ಕಾಜಲ್.

ನಾನು ಇಂದು ಈ ಸ್ಥಾನದಲ್ಲಿ ಇರುವುದಕ್ಕೆ ಕಾರಣ ನನ್ನ ಪತಿ ಹಾಗೂ ನನ್ನ ಕುಟುಂಬ. ಪತಿಯ ಅನುಮತಿ ಪಡೆದೇ ನಟನೆ ಮುಂದುವರಿಸುತ್ತಿದ್ದೇನೆ. ಇಲ್ಲದಿದ್ದರೆ ಇಲ್ಲ ಎಂದಿದ್ದಾರೆ​.

ಅಂದಹಾಗೆ ಕಳೆದ ಅಕ್ಟೋಬರ್​ ತಿಂಗಳಲ್ಲಿ ಉದ್ಯಮಿ ಗೌತಮ್​ ಜತೆ ಕಾಜಲ್​ ಮದುವೆ ಆಗಿದ್ದರು. ಮದುವೆ ನಂತರವೂ ಅವರು ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.