ಬಿವೈ ರಾಘವೇಂದ್ರರನ್ನು ಗೆಲ್ಲಿಸಿ ಅಂತ ಹೇಳಿದ್ದ ಶಾಮನೂರು ವಿರುದ್ದ ಕ್ರಮ ಯಾಕಾಗಲಿಲ್ಲ? ಕೆ.ಎನ್ ರಾಜಣ್ಣ ಚಾಟಿ

ಬೆಂಗಳೂರು,ಏಪ್ರಲ್,17,2026 (www.justkannada.in): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ ವಿರೋಧಿ ಚಟುವಟಿಕೆ ಆರೋಪದ ಮೇಲೆ ಇಬ್ಬರು ಮುಸ್ಲೀಂ ಮುಖಂಡರ ಮೇಲೆ ಕಾಂಗ್ರೆಸ್ ಕ್ರಮ ಕೈಗೊಂಡಿದ್ದು. ಸಿಎಂ ಸಿದ್ದರಾಮಯ್ಯ  ಆಪ್ತರ ಟಾರ್ಗೆಟ್‍ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಮಾಜಿ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕೆ.ಎನ್ ರಾಜಣ್ಣ, ಬಿವೈ ರಾಘವೇಂದ್ರನವರನ್ನ ಗೆಲ್ಲಿಸಿ ಅಂತಾ ಶಾಮನೂರು ಹೇಳಿದ್ದರು.  ಆಗ ಅವರ ಮೇಲೆ ಯಾವುದೇ ಕ್ರಮ ಆಗಲಿಲ್ಲ.  ಇನ್ನೊಂದು ಪಕ್ಷಕ್ಕೆ ಮತ ಹಾಕಿ ಅನ್ನೋದು ಅಶಿಸ್ತು ಅಲ್ಲವೇ..? ಎಂದು ಪ್ರಶ್ನಿಸಿದರು.

ರಾಜ್ಯ ನಾಯಕರ ಜತೆ ಚರ್ಚಿಸಿ ಹೈಕಮಾಂಡ್ ತೀರ್ಮಾನಿಸುವುದು ನನಗೆ ಮತ್ತೆ ಸಚಿವನಾಗುವ ಆಸೆ ಇಲ್ಲ ಆಗುವುದೂ ಇಲ್ಲ ಎಂದು  ಕೆ.ಎನ್ ರಾಜಣ್ಣ ತಿಳಿಸಿದರು.

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಸಚಿವ ಸತೀಶ್ ಜಾರಕಿಹೊಳಿ ಭೇಟಿ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ, ಯಾವ ಅಜೆಂಡಾ ಇಟ್ಟುಕೊಂಡು ಮಾತನಾಡುತ್ತಾರೆ ನನಗೆ ಗೊತ್ತಿಲ್ಲ ಸತೀಶ್ ರಿಂದ  ಡಿಕೆ ಶಿವಕುಮಾರ್ ಭೇಟಿ ಬಗ್ಗೆ ತಪ್ಪು ತಿಳಿಯಬಾರದು ಎಂದರು.

Key words: BY Raghavendra, win, Shamanur,  K.N. Rajanna