ಬೆಂಗಳೂರು,ಫೆಬ್ರವರಿ,24,2026 (www.justkannada.in): ಸಂಪುಟ ಪುನಾರಚನೆ ಮಾಡಿ ಹೊಸ ಶಾಸಕರಿಗೂ ಅವಕಾಶ ನೀಡಿ ಎಂದು ಕೋರಿ ಹೈಕಮಾಂಡ್ ಗೆ 31 ಶಾಸಕರು ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಕೆ.ಎನ್ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಕೆ.ಎನ್ ರಾಜಣ್ಣ, ಹೊಸ ಶಾಸಕರನ್ನ ಮಂತ್ರಿ ಮಾಡಿದರೆ ತಪ್ಪೇನಿಲ್ಲ. ಕುಮಾರಸ್ವಾಮಿ ಮೊದಲ ಬಾರಿಗೆ ಶಾಸಕರಾಗಿ ಸಿಎಂ ಆಗಲಿಲ್ವಾ? ಹೊಸಬರನ್ನ ಮಂತ್ರಿ ಮಾಡಿ ಎನ್ನುವುದಕ್ಕೆ ನನ್ನ ಸಹಮತವಿದೆ ಗೊಂದಲ ಬಗೆಹರಿಸಿ ಎಂದು ಹೈಕಮಾಂಡ್ ಗೆ ಹೇಳಿದ್ದೇವೆ ಎಂದರು.
ಸಚಿವ ಸತೀಶ್ ಜಾರಕಿಹೊಳಿ ಅಹಿಂದ ಹೋರಾಟ ಮಾಡುತ್ತಿರುವುದು ಇದೇ ಮೊದಲಲ್ಲ ಸತೀಶ್ ಜಾರಕಿಹೊಳಿಗೆ ಅಹಿಂದ ಹೋರಾಟ ಹೊಸದಲ್ಲ. ಮಾನವ ಬಂಧ್ವತ್ವಕ್ಕೂ ಅಹಿಂದ ಹೋರಾಟಕ್ಕೂ ಸಾಮ್ಯತೆ ಇದೆ. ಹಿಂದಿನಿಂದಲೂ ಅಹಿಂದ ಹೋರಾಟ ನಡೆಸಿಕೊಂಡೇ ಬಂದಿದ್ದಾರೆ. ಸತೀಶ್ ಜಾರಕಿಹೊಳಿಗೆ ಖಂಡಿತವಾಗಿ ನನ್ನ ಸಹಕಾರ ಇದ್ದೇ ಇರುತ್ತದೆ. ನಾವು ಅಹಿಂದ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದು ಕೆ.ಎನ್ ರಾಜಣ್ಣ ತಿಳಿಸಿದರು.
Key words: new MLAs, Letter High command, K.N. Rajanna







