ಬೆಂಗಳೂರು,ಜನವರಿ,13,2026 (www.justkannada.in): ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್ ರಾಜಣ್ಣ ಒತ್ತಾಯಿಸಿದರು.
ಜ.16ಕ್ಕೆ ಸಿಹಿಸುದ್ದಿ ಬರಲಿದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಬಣದ ಶಾಸಕರ ಹೇಳಿಕೆ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ ಸಿಹಿಸುದ್ದಿನಾದ್ರೂ ಬರಲಿ ಏನಾದರೂ ಬರಲಿ. ಸಿಹಿಸುದ್ದಿ ಕಹಿಸುದ್ದಿ ಕೊಡೋದು ಹೈಕಮಾಂಡ್. ಏನೇ ಆಗಿದ್ದರೂ ಹೈಕಮಾಂಡ್ ಸ್ಪಷ್ಟನೆ ಕೊಡಲಿ ಎಂದರು.
ಸಂಫುಟ ಪುನಾರಚನೆ ಸಿಎಂಗೆ ಕೊಟ್ರೆ ಅನುಕೂಲ ಒಂದು ವೇಳೆ ಅಧಿಕಾರ ಹಂಚಿಕೆ ಬದಲಾವಣೆ ಮಾಡಿದ್ರೆ ಹೈಕಮಾಂಡ್ ನಿರ್ಧಾರಕ್ಕೆ ಇಬ್ಬರೂ ಬದ್ದಅಲ್ವಾ. ಹೈಕಮಾಂಡ್ ಗೊಂದಲ ನಿವಾರಣೆ ಮಾಡಬೇಕು. ಗೊಂದಲ ಪರಿಹಾರ ಮಾಡದಿದ್ದರೆ ಆಡಳಿತದ ಮೇಲೆ ಪರಿಣಾಮ ಬೀರಲಿದೆ. ಶಾಸಕರಿಗೂ ಗೊಂದಲ ಆಗುತ್ತೆ. ಸದ್ಯ ಅನಗತ್ಯವಾಗಿರುವ ಅಭಿಪ್ರಾಯಗಳು ವ್ಯಕ್ತವಾಗುತ್ತದೆ ಎಂದು ಕೆ.ಎನ್ ರಾಜಣ್ಣ ತಿಳಿಸಿದರು.
Key words: High command, clarify, leadership, change, discussion, K.N. Rajanna







