ಬೆಳಗಾವಿ,ಡಿಸೆಂಬರ್,11,2025 (www.justkannada.in): ನಾನು ಸಿಎಂ ಸಿದ್ದರಾಮಯ್ಯ ನೇತೃತ್ವದ ಡಿನ್ನರ್ ಮೀಟಿಂಗ್ ಗೆ ಹೋಗಿರಲಿಲ್ಲ. ಸಚಿವ ಸತೀಶ್ ಜಾರಕಿಹೊಳಿ ನಡೆಸಿದ್ದ ವಾಲ್ಮೀಕಿ ಸಮುದಾಯದ ನಾಯಕರ ಸಭೆಗೆ ಹೋಗಿದ್ದೆ. ಇದೇನು ಶಕ್ತಿ ಪ್ರದರ್ಶನವಲ್ಲ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.
ಇಂದು ಮಾಧ್ಯಮದ ಜೊತೆ ಮಾತನಾಡಿದ ಮಾಜಿ ಸಚಿವ ಕೆ.ಎನ್ ರಾಜಣ್ಣ, ಸತೀಶ್ ಜಾರಕಿಹೊಳಿ ನೇತೃತ್ವದ ವಾಲ್ಮೀಕಿ ಸಮಾಜದ ಸಭೆಗೆ ನಾನು ಹೋಗಿದ್ದೆ ಸಭೆಯಲ್ಲಿ ಸಮುದಾಯದ ಅಭಿವೃದ್ದಿ ವಿಚಾರ ಚರ್ಚೆಯಾಗಿದೆ. ಉಳಿದ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಹೆಚ್ಚಿನ ಮಾಹಿತಿ ನೀಡಲ್ಲ ವಾಲ್ಮೀಕಿ ಸಮಾಜದ ಸಮಸ್ಯೆಗಳು ಕೆಲಸ ಕಾರ್ಯಗಳ ಬಗ್ಗೆ ಚರ್ಚೆಯಾಗಿದೆ. ಇದೇನು ಶಕ್ತಿಪ್ರದರ್ಶನವಲ್ಲ ಎಂದರು.
ಸತೀಶ್ ಜಾರಕಿಹೊಳಿ ಸಿಎಂ ಆಗುವ ಕುರಿತು ಸಭೆ ನಡೆಸಲಾಗಿದೆಯೇ ಎಂಬ ಪ್ರಶ್ನೆಗೆ ಅದ್ಯಾವ ಮಾಹಿತಿಯೂ ಇಲ್ಲ ಎಂದರು. ಸಿದ್ದರಾಮಯ್ಯ ಪರ ಶಕ್ತಿ ಪ್ರದರ್ಶನ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರ ನೀಡುವ ಬದಲು ಕೆ.ಎನ್ ರಾಜಣ್ಣ ನುಣುಚಿಕೊಂಡರು.
ಸಚಿವ ಸಂಪುಟದಿಂದ ತಮ್ಮನ್ನ ಕೈಬಿಟ್ಟ ಬಗ್ಗೆ ಮತ್ತು ಮುಂದೆ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳುವ ಕುರಿತು ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ, ಸಚಿವ ಸ್ಥಾನದಿಂದ ಯಾಕೆ ತೆಗೆದು ಹಾಕಲಾಗಿದೆ ಗೊತ್ತಿಲ್ಲ ಮುಂದೆ ಸೇರಿಸಿಕೊಳ್ಳುತ್ತಾರಾ ಇಲ್ಲವೋ ಗೊತ್ತಿಲ್ಲ ಎಂದರು.
Key words: Discussion, Valmiki community, Former Minister, K.N. Rajanna







