ತಂಜಾವೂರ್ ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ ಲಕ್ಷಾಂತರ ರೂ. ದೇಣಿಗೆ ನೀಡಿದ ಜ್ಯೋತಿಕಾ

ಬೆಂಗಳೂರು, ಆಗಸ್ಟ್ 10, 2020 (www.justkannada.in): ನಟಿ ಜ್ಯೋತಿಕಾ ತಂಜಾವೂರ್ ನ ಸರ್ಕಾರಿ ಆಸ್ಪತ್ರೆಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ.
ಇತ್ತೀಚೆಗೆ ತಂಜಾವೂರ್ ನ ಸರ್ಕಾರಿ ಆಸ್ಪತ್ರೆಯೊಂದರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಜ್ಯೋತಿಕಾ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಇದೀಗ ಅದೇ ಊರಿನ ಆಸ್ಪತ್ರೆ ನೆರವಿಗೆ ಆಗಮಿಸಿದ್ದಾರೆ ಬಹುಭಾಷಾ ನಟಿ.

ಸರ್ಕಾರಿ ಆಸ್ಪತ್ರೆಯನ್ನು ಆಧುನಿಕರಣಗೊಳಿಸಲು ಬರೋಬ್ಬರಿ 25 ಲಕ್ಷ ರೂಪಾಯಿ ಹಣವನ್ನು ದೇಣಿಗೆ ನೀಡಿದ್ದಾರೆ. ಪತಿ ಸೂರ್ಯ ಅವರ ಅಗರಂ ಫೌಂಡೇಶನ್ ನ ಮೂಲಕ ತಮಿಳುನಾಡಿನ ಆರೋಗ್ಯ ಸಚಿವರಿಗೆ ಚೆಕ್ ಹಸ್ತಾಂತರಿಸಿದ್ದಾರೆ.