Monday, September 21, 2026

BDA Apartments

MYSORE COURT: ನ್ಯಾಯಮೂರ್ತಿ ರವೀಂದ್ರ ಹೆಗಡೆ ಅವರಿಗೆ ಆತ್ಮೀಯ ಬೀಳ್ಕೋಡುಗೆ BDA JK_Adv BDA Adv
Home Front Page MYSORE COURT: ನ್ಯಾಯಮೂರ್ತಿ ರವೀಂದ್ರ ಹೆಗಡೆ ಅವರಿಗೆ ಆತ್ಮೀಯ ಬೀಳ್ಕೋಡುಗೆ

MYSORE COURT: ನ್ಯಾಯಮೂರ್ತಿ ರವೀಂದ್ರ ಹೆಗಡೆ ಅವರಿಗೆ ಆತ್ಮೀಯ ಬೀಳ್ಕೋಡುಗೆ

MYSORE COURT TOP-BANNER-01 TOP BANNER 01

ಮೈಸೂರು, ನ.14,2024: (www.justkannada.in news) ಜಿಲ್ಲಾ  ಸತ್ರ ಮತ್ತು ಪ್ರಧಾನ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಕರ್ನಾಟಕ ಉಚ್ಛ ನ್ಯಾಯಾಲಯದ ರಿಜಿಸ್ಟ್ರಾರ್ (ವಿಜಿಲೆನ್ಸ್) ಆಗಿ ವರ್ಗಾವಣೆಗೊಂಡಿರುವ ರವೀಂದ್ರ ಹೆಗಡೆ ಅವರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಮೈಸೂರು ಜಿಲ್ಲಾ ವಕೀಲರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಿಗೆ ಮೈಸೂರು ಪೇಟ ತೊಡಿಸಿ, ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯ ನೆನಪಿನ ಕಾಣಿಕೆ ಹಾಗೂ ಹೂಗುಚ್ಛ ನೀಡಿ ಆತ್ಮೀಯವಾಗಿ ಅಭಿನಂದಿಸಲಾಯಿತು.

ಈ ವೇಳೆ ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್ ಲೋಕೇಶ್, ಕಾರ್ಯದರ್ಶಿಯಾದ ಎ ಜಿ ಸುಧೀರ್, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಯುತ ಡಿ ಪುಟ್ಟಸ್ವಾಮಿ ಹಾಗೂ ಇತರರು ಹಾಜರಿದ್ದರು.

ನ್ಯಾಯಮೂರ್ತಿ ರವೀಂದ್ರ ಹೆಗಡೆ ಅವರಿಗೆ ಆತ್ಮೀಯ ಬೀಳ್ಕೋಡುಗೆ court 01

ಇದೇ ವೇಳೆ ಮಾತನಾಡಿದ ಗೌರವಾನ್ವಿತ ನ್ಯಾಯಮೂರ್ತಿ ರವೀಂದ್ರ ಹೆಗಡೆ, ಮೈಸೂರಿನ ನ್ಯಾಯಾಲಯದಲ್ಲಿ ಕೆಲಸ ಮಾಡುವುದೇ ಒಂದು ಹೆಮ್ಮೆಯ ಸಂಗತಿ. ಇಲ್ಲಿನ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗಳು ನನಗೆ ಪೂರ್ಣ ಸಹಕಾರ ನೀಡಿದರು. ಈ ಸಹಕಾರದಿಂದ ಕೆಲವೊಂದಷ್ಟು ಕೆಲಸಗಳನ್ನು ಮಾಡಲು ಸಾಧ್ಯವಾಯಿತು. ಕ್ಯಾಂಟೀನ್ ಸೌಲಭ್ಯ ಮತ್ತು ಶೌಚಾಲಯಗಳ ಉನ್ನತೀಕರಿಸುವ ಬಗ್ಗೆ ನನಗೆ ಸಾಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದರು.

key words: MYSORE COURT, A warm farewell, Justice Ravindra Hegde