ನಟಿ ಸಂಜನಾಗೆ ಎರಡು ದಿನಗಳ ಕಾಲ ನ್ಯಾಯಾಂಗ ಬಂಧನ…

ಬೆಂಗಳೂರು,ಸೆಪ್ಟಂಬರ್, 16,2020(www.justkananda.in):  ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾಗೆ  ಎರಡು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ 1ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.jk-logo-justkannada-logo

ಸೆಪ್ಟಂಬರ್ 18 ರವರೆಗೆ ನಟಿ ಸಂಜನಾಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇಂದು ನಟಿ ಸಂಜನಾರ ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆ  ನಟಿ ಸಂಜನಾರನ್ನ ಕೋರ್ಟ್ ಹಾಜರುಪಡಿಸಲಾಗಿತ್ತು. ಇದೀಗ ನಟಿ ಸಂಜನಾಗೆ 2 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ಅಲ್ಲದೆ ಸೆಪ್ಟಂಬರ್ 18 ರಂದು ನಟಿ ಸಂಜನಾರನ್ನ ವಿಶೇಷ ಕೋರ್ಟ್ ಗೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ. Judicial custody -actress -Sanjana -two days.

ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದೆಡೆ ಆರೋಪಿಗಳಾದ ವೀರೆನ್ ಖನ್ನಾ , ರವಿಶಂಕರ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ  ಬೆಂಗಳೂರಿನ 33ನೇ ಸಿಸಿಹೆಚ್ ಕೋರ್ಟ್ ಆದೇಶ ಹೊರಡಿಸಿದೆ.

Key words: Judicial custody -actress -Sanjana -two days.