Thursday, August 13, 2026

BDA Apartments

Home Front Page ಪ್ರವಾಹ  ಪೀಡಿತ ಸಂತ್ರಸ್ತ ಕುಟುಂಬದ ಮಕ್ಕಳಿಗೆ ನೆರವಾದ ಜೆ.ಎಸ್.ಎಸ್ ಸಂಸ್ಥೆ…

ಪ್ರವಾಹ  ಪೀಡಿತ ಸಂತ್ರಸ್ತ ಕುಟುಂಬದ ಮಕ್ಕಳಿಗೆ ನೆರವಾದ ಜೆ.ಎಸ್.ಎಸ್ ಸಂಸ್ಥೆ…

ಮೈಸೂರು,ಸೆ,27,2019(www.justkannada.in): ನೆರೆ ಹಾವಳಿಯಿಂದಾಗಿ ನಲುಗಿರುವ ಪ್ರವಾಹ  ಪೀಡಿತ ಸಂತ್ರಸ್ತರ ಕುಟುಂಬದ ಮಕ್ಕಳ ನೆರವಿಗೆ ಇದೀಗ ಮೈಸೂರಿನ ಜೆ. ಎಸ್ ಎಸ್ ಸಂಸ್ಥೆ ಧಾವಿಸಿದೆ.

ಸಂತ್ರಸ್ತ ಕುಟುಂಬದ ಮಕ್ಕಳಿಗೆ  ಜೆಎಸ್ ಎಸ್ ಸಂಸ್ಥೆ ಉಚಿತ ಶಿಕ್ಷಣ ಹಾಗೂ ವಸತಿ ಸೌಲಭ್ಯ ಕಲ್ಪಿಸುವ ಮೂಲಕ ನೆರವಾಗಿದೆ.  ಬಾಗಲಕೋಟೆ,  ಬೆಳಗಾವಿ ಹಾಗೂ ಕೂಡಲಸಂಗಮ ಸೇರಿದಂತೆ  ಹಲವು ಕಡೆಗಳಿಂದ  ಬಂದ ನೆರೆ ಸಂತ್ರಸ್ತ ಕುಟುಂಬದ ಮಕ್ಕಳಿಗೆ  ಪ್ರಾಥಮಿಕ ಶಿಕ್ಷಣದಿಂದಿಡಿದು ಇಂಜಿನಿಯರಿಂಗ್,  ಡಿಪ್ಲೋಮದವರೆಗೂ ಉಚಿತ ಶಿಕ್ಷಣದ ಜೊತೆಗೆ ವಸತಿ ವ್ಯವಸ್ಥೆ ಮಾಡಲು ಜೆ.ಎಸ್ ಎಸ್ ಸಂಸ್ಥೆ ಮುಂದಾಗಿದೆ.

ಮೊದಲ ಹಂತದಲ್ಲಿ ಬಂದ 7 ಮಂದಿಗೆ ಸುತ್ತೂರು ಶ್ರೀ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ರಾಜ್ಯದ  ಇನ್ನೂ ಸಾಕಷ್ಟು ಜಿಲ್ಲೆಗಳಲ್ಲಿ  ಪ್ರವಾಹಕ್ಕೆ ಕುಟುಂಬಗಳಿದ್ದು,  ಸದ್ಯದ  ಪರಿಸ್ಥಿತಿಯಲ್ಲಿ ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟಾಗುವ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ  ಹಲವು ಮಕ್ಕಳು ಬರಲಿದ್ದಾರೆ. ಎಷ್ಟೇ ಮಕ್ಕಳು ಬಂದರು ನಮ್ಮ ಸಂಸ್ಥೆಗೆ  ಆಹ್ವಾನ ಇದೆ ಎಂದ ಸುತ್ತೂರು ಶ್ರೀಗಳು ತಿಳಿಸಿದರು.

Key words: JSS- helped –flood- Flood victim-families-mysore