Wednesday, August 12, 2026

BDA Apartments

Home Front Page ಮೈಸೂರಿನಲ್ಲಿ ಫೆ.19 ರಂದು ಪತ್ರಕರ್ತ ಸುದೇಶ ದೊಡ್ಡಪಾಳ್ಯ ಅವರ ಪುಸ್ತಕಗಳು ಬಿಡುಗಡೆ.

ಮೈಸೂರಿನಲ್ಲಿ ಫೆ.19 ರಂದು ಪತ್ರಕರ್ತ ಸುದೇಶ ದೊಡ್ಡಪಾಳ್ಯ ಅವರ ಪುಸ್ತಕಗಳು ಬಿಡುಗಡೆ.

ಮೈಸೂರು ,ಫೆಬ್ರವರಿ,16,2023(www.justkannada.in):  ಪತ್ರಕರ್ತ ಸುದೇಶ ದೊಡ್ಡಪಾಳ್ಯ ಅವರು ರಚಿಸಿರುವ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಫೆಬ್ರವರಿ 19 ರಂದು ಮೈಸೂರಿನಲ್ಲಿ ನಡೆಯಲಿದೆ.

ನಗರದ ಹುಣಸೂರು ರಸ್ತೆಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಸುದೇಶ ದೊಡ್ಡಪಾಳ್ಯ ಅವರ ಈಶಾನ್ಯ ದಿಕ್ಕಿನಿಂದ (ಅಂಕಣ ಬರಹ), ಹಂಗರಹಳ್ಳಿಯ ಬರ್ಬರ ಸಂಕೋಲೆಗಳು (ವಿಭಿನ್ನ ಬರಹಗಳ ಕಟ್ಟು). ಒಲವು ನಮ್ಮ ಬದುಕು (ಪ್ರೇಮ ಕಥನಗಳ ಸರಣಿ-ಮೂರನೆಯ ಮುದ್ರಣ) ಪುಸ್ತಕಗಳು ಪತ್ರಕರ್ತ ಕೃಷ್ಣಪ್ರಸಾದ್‌  ಅವರಿಂದ ಬಿಡುಗಡೆಗೊಳ್ಳಲಿವೆ.

ಪುಸ್ತಕಗಳ ಕುರಿತು ಪುಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಅವರು ಮಾತನಾಡಲಿದ್ದು, ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಕೃಪಾಕರ ಸೇನಾನಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಸುದೇಶ ದೊಡ್ಡಪಾಳ್ಯ ಅವರ ಪುಸ್ತಕಗಳು ವಿಸ್ಮಯ ಬುಕ್‌ಹೌಸ್ ಮೂಲಕ ಮುದ್ರಣಗೊಂಡಿದ್ದು,  ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಪುಕಾಶ್ ಚಿಕ್ಕಪಾಳ್ಯ  ಮನವಿ ಮಾಡಿದ್ದಾರೆ.

Key words: Journalist- Sudesh Doddapalya- books – release – February 19 – Mysore