ಬೆಂಗಳೂರು, ಫೆಬ್ರವರಿ,18,2026 (www.justkannada.in): ಪತ್ರಕರ್ತರು ಜನರನ್ನು ಸೆಳೆಯಲು ಮಾತ್ರ ಸುದ್ದಿಗೊಂದು ಗುದ್ದು ಕೊಡಬೇಕೆ ಹೊರತು ಸುಳ್ಳುಗಳನ್ನು ವೈಭವೀಕರಿಸಬಾರದು. ಏನೇ ಸಂದರ್ಭ ಬಂದರೂ ನಮ್ಮ ಮಾತಿನ ತಕ್ಕಡಿ ಸತ್ಯದ ಕಡೆಗೆ ವಾಲಬೇಕು” ಎಂದು ಪತ್ರಕರ್ತ ರಮಾಕಾಂತ್ ಅಭಿಪ್ರಾಯಪಟ್ಟರು.
ಜಯನಗರ ನ್ಯಾಷನಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಮ್ಮಿಕೊಂಡಿದ್ದ “ಬದಲಾಗುತ್ತಿರುವ ಮಾಧ್ಯಮಗಳು ಮತ್ತು ಸುದ್ದಿ ಪ್ರಸ್ತುತಿ” ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತ ರಮಾಕಾಂತ್ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಹೊಸ ತಂತ್ರಜ್ಞಾನಗಳ ಆಗಮನ ಮಾಧ್ಯಮಕ್ಕೆ ಪೂರಕವೇ ಹೊರತು ಮಾರಕವಲ್ಲ, ಅವುಗಳನ್ನು ಅಳವಡಿಸಿಕೊಂಡು ಹೊಸ ಬದಲಾವಣೆಗೆ ಪತ್ರಕರ್ತರು ಸಜ್ಜಾಗಬೇಕು” ಎಂದು ಕರೆ ನೀಡಿದರು.
ಇದೇ ವೇಳೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊರತಂದ ಕ್ಯಾಂಪಸ್ ಪತ್ರಿಕೆ, ‘ದಿ ಎನ್. ಸಿ.ಜೆ ಟೈಮ್ಸ್’ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಎನ್ ಇ ಎಸ್ ಆಫ್ ಕರ್ನಾಟಕದ ಚೇರ್ಮನ್ ಡಾ. ವೆಂಕಟರಾಮರೆಡ್ಡಿ , ಪ್ರಾಂಶುಪಾಲೆ ಡಾ. ಸಿ. ವಿಜಯಲಕ್ಷ್ಮಿ, ಡಾ. ಜಯದೇವಪ್ಪ, ಪ್ರೊ. ಚೆಲುವಪ್ಪ, ಪ್ರೊ. ಮಮತಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ವೈಶಾಲಿ ಎಚ್.ಬಿ., ಪ್ರೊ. ರಂಗನಾಥ್ ಜಿ.ಎನ್ , ಅಧ್ಯಾಪಕರು ಉಪಸ್ಥಿತರಿದ್ದರು.
Key words: speech, truth, Journalist, Ramakanth







