Tuesday, September 29, 2026

BDA Apartments

Home Front Page ಪ್ರಧಾನಿ ಮೋದಿ ಅವರಿಂದ ಉದ್ಯೋಗ ಮೇಳ: ಮೈಸೂರಿನಲ್ಲಿ ನೇಮಕಾತಿ ಪತ್ರ ವಿತರಣೆ ಮಾಡಿದ ಕೇಂದ್ರ ಸಚಿವೆ...

ಪ್ರಧಾನಿ ಮೋದಿ ಅವರಿಂದ ಉದ್ಯೋಗ ಮೇಳ: ಮೈಸೂರಿನಲ್ಲಿ ನೇಮಕಾತಿ ಪತ್ರ ವಿತರಣೆ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

ಮೈಸೂರು,ಮೇ,16,2023(www.justkannada.in): ದೇಶಾದ್ಯಂತ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆದ  ಸುಮಾರು 71 ಸಾವಿರಕ್ಕೂ ಹೆಚ್ಚು ಯುವಜನತೆಗೆ ಏಕಕಾಲದಲ್ಲಿ ಪ್ರಧಾನಿ ನರೇಂದ್ರ ನೇಮಕಾತಿ ಪತ್ರ ವಿತರಣೆ ಮಾಡಿದರು.

ಈ ಅಂಗವಾಗಿ ಮೈಸೂರಿನಲ್ಲಿ ನಗರದ ಮಾನಸ ಗಂಗೋತ್ರಿಯಲ್ಲಿರುವ  ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಜ್ಞಾನ ಉದ್ಯಾನ ಸಭಾಂಗಣದಲ್ಲಿ ಉದ್ಯೋಗ ಮೇಳ ಮಿಷನ್ ನೇಮಕಾತಿ  5ನೇ  ರಾಷ್ಟ್ರಿಯ ಸಮಾರಂಭ ಆಯೋಜಿಸಲಾಗಿತ್ತು. ಭಾರತೀಯ ಅಂಚೆ ಇಲಾಖೆ, ಗೃಹ ಸಚಿವಾಲಯ, ರೈಲ್ವೆ ಸಚಿವಾಲಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಇವರ ಸಮನ್ವಯದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಪ್ರಧಾನಿ ಮೋದಿ ಅವರಿಂದ ಉದ್ಯೋಗ ಮೇಳ pm modi pm modi 1

ಕಾರ್ಯಕ್ರಮದಲ್ಲಿ  ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಉದ್ಯೋಗ ಆಕಾಂಕ್ಷಿಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ  ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ  ಶೋಭಾ ಕರಂದ್ಲಾಜೆ, ಸಂಸದ ಪ್ರತಾಪ್ ಸಿಂಹ, ಸೇರಿದಂತೆ ಹಲವಾರು ಭಾಗಿಯಾಗಿದ್ದರು.

ಉದ್ಯೋಗ ಮೇಳದಲ್ಲಿ ನೇಮಕವಾದ ಯುವಕ ಯುವತಿಯರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಥಳದಲ್ಲೇ ನೇಮಕಾತಿ ಪತ್ರ ವಿತರಣೆ ಮಾಡಿದರು.

Key words: Job Fair -PM Modi- Union Minister -Shobha Karandlaje –appointment- letter -mysore