Sunday, October 11, 2026

Dasara Wishes

Happy Dasara
Home Cinema JK EXCLUSIVE : ಅಣ್ಣಾವ್ರ ಬಗ್ಗೆ ಸಾಹಿತಿ ಎಸ್.ಎಲ್.ಬೈರಪ್ಪರ ‘ ಸ್ಪಷ್ಟ ‘ ಅಭಿಪ್ರಾಯವಿದು.

JK EXCLUSIVE : ಅಣ್ಣಾವ್ರ ಬಗ್ಗೆ ಸಾಹಿತಿ ಎಸ್.ಎಲ್.ಬೈರಪ್ಪರ ‘ ಸ್ಪಷ್ಟ ‘ ಅಭಿಪ್ರಾಯವಿದು.

 

ಮೈಸೂರು, ಮೇ 14, 2020 : (www.justkannada.in news) : ಡಾ. ರಾಜ್ ಕುಮಾರ್ ಒರ್ವ ಅದ್ಭುತ ನಟ ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್.ಭೈರಪ್ಪ ತಿಳಿಸಿದರು.

ಕನ್ನಡದ ವರನಟ ಡಾ. ರಾಜ್ ಕುಮಾರ್ ಅವರ ಬಗೆಗೆ ಸಾಹಿತಿ ಎಸ್.ಎಲ್.ಬೈರಪ್ಪ ಹೇಳಿದ್ದಾರೆ ಎನ್ನಲಾದ ಮಾತೊಂದು ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿತ್ತು. ಸ್ಯಾಂಡಲ್ ವುಡ್ ನಿರ್ದೇಶಕದ್ವಯರಾದ ದೊರೈ-ಭಗವಾನ್ ಜೋಡಿಯ ಭಗವಾನ್ , ಸಂದರ್ಶನವೊಂದರಲ್ಲಿ ಅಣ್ಣಾವ್ರ ವಿಷಯ ಪ್ರಸ್ತಾಪಿಸುವಾಗ, ಸಾಹಿತಿ ಎಸ್.ಎಲ್.ಬೈರಪ್ಪ ಅವರು ಡಾ.ರಾಜ್ ಬಗೆಗೆ ಹೇಳಿದ್ದರು ಎನ್ನಲಾದ ಮಾತೊಂದನ್ನು ಉಲ್ಲೇಖಿಸಿದ್ದರು.

Saraswathi Samman Awarded Literature- SL Bhairappa- Dr. Rajkumar - an amazing actor-mysore.

ಸಂದರ್ಶನದ ಈ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಸಿಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಪ್ರಸ್ತುತ ಡಾ.ರಾಜ್ ದೈಹಿಕವಾಗಿ ನಮ್ಮೊಂದಿಗಿಲ್ಲ. ಇನ್ನು ಎಸ್.ಎಲ್.ಬೈರಪ್ಪ ಹಾಗೂ ಭಗವಾನ್ ಸಹ ಎಂಬತ್ತರ ಆಸುಪಾಸಿನ ಹಿರಿಯ ಜೀವಗಳು. ಆದ್ದರಿಂದ ವಿವಾದದ ಗಂಭೀರತೆ ಅರಿತುಕೊಂಡ ಜಸ್ಟ್ ಕನ್ನಡ, ಮೈಸೂರಿನಲ್ಲೇ ನೆಲೆಸಿರುವ ಎಸ್.ಎಲ್.ಬೈರಪ್ಪ ಅವರನ್ನೇ ಖುದ್ದು ಈ ಬಗ್ಗೆ ವಿಚಾರಿಸಲು ನಿರ್ಧರಿಸಿ ಅದಕ್ಕೆ ಪ್ರಯತ್ನ ನಡೆಸಿ ಕಡೆಗೆ ಯಶಸ್ವಿಯಾಯಿತು.

ಮೈಸೂರಿನಲ್ಲಿ ‘ ಜಸ್ಟ್ ಕನ್ನಡ ‘ ಜತೆ ಮಾತನಾಡಿದ ಸಾಹಿತಿ ಎಸ್.ಎಲ್.ಬೈರಪ್ಪ, ನನಗೆ ಈ ಭಗವಾನ್ ರ ( ಚನಲಚಿತ್ರ ನಿರ್ದೇಶಕ ) ಪರಿಚಯವೂ ಇಲ್ಲ. ಅವರನ್ನು ಭೇಟಿಯೂ ಆಗಿಲ್ಲ. ಡಾ. ರಾಜ್ ಕುಮಾರ್ ಒರ್ವ ಗ್ರೇಟ್ ಸ್ಟಾರ್ ‘ ಎಂದು ತಿಳಿಸಿದರು.
ಜಸ್ಟ್ ಕನ್ನಡ ಜತೆ ಮಾತನಾಡುವ ಮೂಲಕ ಸಾಹಿತಿ ಎಸ್.ಎಲ್.ಬೈರಪ್ಪ ವಿವಾದಕ್ಕೆ ತೆರೆ ಎಳೆದಿದ್ದಾರೆ.

 

key words : Saraswathi Samman Awarded Literature- SL Bhairappa- Dr. Rajkumar – an amazing actor-mysore.

 

j-u-s-t-k-a-n-n-a-d-a

summary :

Saraswathi Samman Awarded Literature SL Bhairappa said Dr. Rajkumar is an amazing actor. I am not acquainted with Bhagavan. Nor even met him. Dr. Raj Kumar is a great star.