ಜಾರ್ಖಾಂಡ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಹಿನ್ನೆಲೆ: ಚಾಮರಾಜನಗರದಲ್ಲಿ ಕೈ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮ…

ಚಾಮರಾಜನಗರ,ಡಿ,23,2019(www.justkannada.in): ಜಾರ್ಖಾಂಡ್ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟ ಸರಳ ಬಹುಮತ ಪಡೆದಿದೆ. ಹೀಗಾಗಿ ಚಾಮರಾಜನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.

ಜಾರ್ಖಾಂಡ್ ನಲ್ಲಿ ಕಾಂಗ್ರೆಸ್ ಗೆಲುವಿಗೆ ಹರ್ಷ ಸಂತಸ ವ್ಯಕ್ತಪಡಿಸಿದ ಚಾಮರಾಜನಗರ ಕಾಂಗ್ರೆಸ್ ಕಾರ್ಯಕರ್ತರು ನಗರದ ಪಟ್ಟಣದಲ್ಲಿರುವ ಕಾಂಗ್ರೆಸ್ ಕಛೇರಿ ಮುಂದೆ  ಸಮಾವೇಶಗೊಂಡು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಕೂಗಿ  ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿ ಕೇಂದ್ರದ ದುರಾಡಳಿತ ಜಾರ್ಖಾಂಡ್ ವಿಧಾನಸಭೆಯಲ್ಲಿ  ಸಾಬೀತಾಗಿದೆ ಎಂದು ಹೇಳಿದರು.  ಜಾರ್ಖಾಂಡ್ ವಿಧಾಸಭೆ ಚುನಾವಣೆಯಲ್ಲಿ ಬಿಜೆಪಿ 27 ಜೆಎಂಎಂ 29 ಮತ್ತು ಕಾಂಗ್ರೆಸ್ 15 ಎಜೆಎಸ್ ಯು 3 ಮತ್ತು ಇತರೆ 7 ಸ್ಥಾನದಲ್ಲಿ ಜಯ ಸಾಧಿಸಿವೆ. ಕಾಂಗ್ರೆಸ್-ಜೆಎಂಎಂ-ಆರ್ ಜೆಡಿ ಮೈತ್ರಿಕೂಟವು ಸರಳ ಬಹುಮತ ಸಾಧಿಸಿದೆ.

Key words: Jharkhand assembly –elections- Congress –won-Chamarajanagar-celebration- activitist